

ಕಲಬುರಗಿ: ಕರ್ನಾಟಕ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದಿAದ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾನಿಕೇತನ ಶಾಲೆಗೆ ಕುಸ್ಮಾ ಸ್ಕೂಲ್ ಮ್ಯಾನೇಜ್ಮೆಂಟ್ ಎಕ್ಸ್ಲೆನ್ಸ್ ಅವಾರ್ಡ್ ನೀಡಿ ಗೌರವಿಸಿದೆ.
ಶಾಲೆ ಮುಖ್ಯೋಪಾಧ್ಯಾಯಿನಿ ಅಂಬಿಕಾ ರೆಡ್ಡಿ ಅವರು ಪುರಸ್ಕಾರವನ್ನು ಸಂಸ್ಥೆ ಅಧ್ಯಕ್ಷೆ ಸುವರ್ಣ ಭಗವತಿ ಅವರಿಗೆ ಹಸ್ತಾಂತರಿಸಿ, ಅಭಿನಂದಿಸಿದರು.
ಶಿP್ಷÀಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆ ಪರಿಗಣಿಸಿ ಪುರಸ್ಕಾರ ನೀಡಲಾಗಿದೆ. ಇದು ನಮ್ಮ ಶಾಲೆಗೆ ಸಂತಸ ಹಾಗೂ ಹೆಮ್ಮೆಯ ಸಂಗತಿ. ಪುರಸ್ಕಾರದಿಂದ ಜವಾಬ್ದಾರಿ ಹೆಚ್ಚಾಗಿದೆ. ಹೆಚ್ಚಿನ ಗುಣಮಟ್ಟದ ಶಿP್ಷÀಣ ನೀಡುವಲ್ಲಿ ಶ್ರಮಿಸಬೇಕು ಎಂದು ಸುವರ್ಣ ಭಗವತಿ ಹೇಳಿದರು.
ಶಾಲೆಗೆ ಪುರಸ್ಕಾರ ಬಂದಿರುವುದಕ್ಕೆ ಶಾಲಾ ಸಿಬ್ಬಂದಿ ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿz್ದÁರೆ. ಪ್ರಾಂಶುಪಾಲ ಸಿದ್ದಪ್ಪ ಭಗವತಿ, ಶೈಕ್ಷಣಿಕ ಸಂಯೋಜಕ ನಿಖಿಲ್ ಪಾಟೀಲ್, ಸುಮಾ ಭಗವತಿ, ಸುಷ್ಮಾ ಭಗವತಿ ಇತರರಿದ್ದರು.