

ಬಾಗಲಕೋಟೆ: ನವನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿವಿಧ ಸ್ಪರ್ಧೆಗಳಲ್ಲಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಬಿಎ ೫ನೇ ಸೆಮಿಸ್ಟರ ವಿದ್ಯಾರ್ಥಿ ಹುಲಿಗೆವ್ವ ಹೂಲಗನ್ನವರ ಯೋಗ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯ ತಂಡಕ್ಕೆ ಆಯ್ಕೆಯಾದರೆ, ಬಿಎ ಪ್ರಥಮ ವರ್ಷದ ಬೋರವ್ವ ನಂದೇಗೋಳ ಕುಸ್ತಿ ಸ್ಪರ್ಧೆ ಹಾಗೂ ಸಚಿನ ಶಿವಶರಣ ಪುಟಬಾಲ್ ಸ್ಪರ್ಧೆಯಲ್ಲಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಅರುಣಕುಮಾರ ಗಾಳಿ ಹಾಗೂ ಐ.ಕ್ಯೂ.ಎ.ಸಿ ಸಂಚಾಲಕ ಅಜೀತ ನಾಗರಾಳೆ, ಸಾಂಸ್ಕೃತಿಕ ಸಂಚಾಲಕಿ ಸವಿತಾ ಪಟ್ಟಣಶೆಟ್ಟರ ತಿಳಿಸಿದ್ದಾರೆ.