ವಿಳಂಬ ಧೋರಣೆ ಮಾಡಿದರೇ ಮತ್ತೆ ಹೋರಾಟ

bkt-28-2
ಬಾಗಲಕೋಟೆ ನಗರದ ಪ್ರೆಸ್ ಕ್ಲಬ್ ನಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಹನುಮಂತ ಡೋಣಿ, ಬಲ್ಲುಸ್ವಾಮಿ ಸುರಪುರ, ಜಯರಾಜ ಹರ್ಡೆಕರ್, ಯಲ್ಲಪ್ಪ ಕ್ಯಾದಿಗೇರಿ, ವೆಂಕಟೇಶ ಲೋಕಾಪುರ ಸೇರಿದಂತೆ ಇತರರರು ಇದ್ದರು.
Published on

ಬಾಗಲಕೋಟೆ: ಎಸ್ಸಿ, ಎಸ್ಟಿಗಳ ಮೀಸಲಾತಿ ಪ್ರಮಾಣ ಹೆಚ್ಚಿಸಲು ಪ್ರಸನ್ನಾಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಇದಕ್ಕೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷಗಳ ಸಭೆ ಕರೆದು ತಿರ್ಮಾನ ಮಾಡುವುದಾಗಿ ಸದನದಲ್ಲಿ ಹೇಳಿಕೆ ನೀಡಿರುವುದು ಸ್ವಾಗತಾರ್ಹ. ಮತ್ತೆ ವಿಳಂಬ ಧೋರಣೆ ಮಾಡಿದಲ್ಲಿ ಹೋರಾಟ ಮಾಡಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ ಹೇಳಿದರು.
ಮೀಸಲಾತಿ ಹೆಚ್ಚಳ ಕುರಿತಂತೆ ಸ್ಪಷ್ಟವಾದ ನಿರ್ದಾರ ಸೆ.28 ಒಳಗಾಗಿ ಹೇಳುವಂತೆ ಪ್ರಸನ್ನಾಂದಪುರಿ ಸ್ವಾಮೀಜಿ ಗಡವು ನೀಡಿದ್ದರು. ಈ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಭಾಪತಿ ವಿಶ್ವೇಶ್ವೆರ ಹೆಗಡೆ ಕಾಗೇರಿ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಂತಿಮ ಗೆಲವು ಅಲ್ಲ. ವಾಲ್ಮೀಕಿ ಜಯಂತಿ ಒಳಗಾಗಿ ಮೀಸಲಾತಿ ಬಗ್ಗೆ ಸ್ಪಷ್ಟವಾದ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದಲ್ಲಿ ಸರ್ಕಾರದಿಂದ ಆಚರಿಸುವ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಬಹಿಷ್ಕರಿಸಿ ಕಪ್ಪು ಭಾವುಟ ಪ್ರದರ್ಶನ, ಪ್ರತಿಭಟನೆ ಮಾಡಲಾಗುವುದು. ಬೆಂಗಳೂರಿನ ಪ್ರೀಡಂ ಪಾರ್ಕನದಲ್ಲಿ ಅ.9 ರಂದು ವಾಲ್ಮೀಕಿ ಜಯಂತಿ ವಿಜೃಂಬಣೆಯಿಂದ ಆಚರಿಸಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ನಾಯವಾದಿ ರಾಜು ಮನ್ನಿಕೇರಿ ಮಾತನಾಡಿ, ಈ ಹಿಂದೆ ಉಪ ಚುನಾವಣೆ, ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಮೀಸಲಾತಿ ಹೆಚ್ಚಳ ಕುರಿತು ಭರವಸೆ ನೀಡಿದ್ದರು. ಅವರೇ ಸಿಎಂ ಇದ್ದಾರೆ. ಬೇಡಿಕೆ ಈಡೇರಿಸಬೇಕು. ವಿಳಂಬ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ಆಗ್ರಹಿಸಿದರು.
ಮುಖಂಡರಾದ ಹನುಮಂತ ಡೋಣಿ, ಬಲ್ಲುಸ್ವಾಮಿ ಸುರಪುರ, ಜಯರಾಜ ಹರ್ಡೆಕರ್, ಯಲ್ಲಪ್ಪ ಕ್ಯಾದಿಗೇರಿ, ವೆಂಕಟೇಶ ಲೋಕಾಪುರ ಸೇರಿದಂತೆ ಇತರರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net