ವಿರೋಧಿಸುವ ಶಾಸಕರನ್ನು ಸೋಲಿಸಲಾಗುವುದು

bkt-9-5
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ಪಾಂಡು ಪೂಜಾರಿ, ಸತೀಶ ಮಾದರ, ಗ್ಯಾನಪ್ಪ ಚಲವಾದಿ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ಡಿಸೆಂಬರ್ ತಿಂಗಳಲ್ಲಿ ನಡೆಯುವ ಚಳಿಗಾಲ ಅಧಿವೇಶನದಲ್ಲಿ ನ್ಯಾ.ಎ.ಜೆ.ಸದಾಶಿವ ಮೂರ್ತಿ ಆಯೋಗದ ವರದಿಯನ್ನು ಅಂಗೀಕರಿಸಿ ಪರಿಶಿಷ್ಟರ ಒಳ ಮೀಸಲು ಜಾರಿಗೊಳಿಸಲು ವಿಧೇಯಕ ಮಂಡಿಸಬೇಕು. ಒಳಮೀಸಲಾತಿ ವಿರೋಧ ಮಾಡುವ ಯಾವುದೇ ಪಕ್ಷದ ಶಾಸಕರನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೋಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಮಾದಿಗ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮುತ್ತಣ್ಣ ಬೆಣ್ಣೂರ ಎಚ್ಚರಿಕೆ ನೀಡಿದರು.
ನಾಗಮೋಹನದಾಸ ಆಯೋಗ ವರದಿ ಅನುಸಾರ ಶೇ.೨ ರಷ್ಟು ಮೀಸಲಾತಿ ಹೆಚ್ಚಿಸಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದಂತೆ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಶೇ.೧೫ ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಶಿಫಾರಸ್ಸು ಮಾಡಿರುವುದನ್ನು ಸಂಪುಟದಲ್ಲಿ ಅಂಗೀಕರಿಸಿ ಏರಿಕೆಯ ಶೇ.೨ ಮೀಸಲಾತಿ ಸೇರಿಸಿಕೊಂಡು ಒಟ್ಟು ಶೇ.೧೭ ರ ಮೀಸಲಾತಿಯಲ್ಲಿ ಪರಿಶಿಷ್ಟರ ೧೦೧ ಆಯಾ ಜಾತಿಗಳ ಗುಂಪುಗಳಿಗೆ ಜನ ಸಂಖ್ಯಾವಾರು ಒಳ ಮೀಸಲಾತಿ ಕಲ್ಪಿಸಬೇಕು. ವಿರೋಧ ಮಾಡುವ ಶಾಸಕರಿಗೆ ತಕ್ಕ ಪಾಠ ಕಲಿಸಲಾಗುವುದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಒಳ ಮೀಸಲಾತಿ ಜಾರಿ ವಿಷಯದಲ್ಲಿ ರಾಜಕೀಯ ಪಕ್ಷಗಳು ಹಿಂದೇಟು ಹಾಕಿದರೆ ಮುಂದಿನ ಚುನಾವಣೆಯಲ್ಲಿ ಗಂಭೀರ ಸಮಸ್ಯೆ ಎದುರಿಸಬೇಕಾಗುತ್ತದೆ. ಅಸ್ಪೃಶ್ಯರ ಬೆಂಬಲವಿಲ್ಲದೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲಾರದು. ಅತಂತ್ರ ಸರ್ಕಾರಕ್ಕೆ ರಾಜ್ಯದ ಅಸ್ಪೃಶ್ಯ ರು ಮುನ್ನಡಿ ಬರೆಯಲಿದ್ದಾರೆ ಎಂದರು.
ನ.೨೫ ರಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯ ನಿವಾಸದಿಂದ ಒಳ ಮೀಸಲು ಜಾರಿಗಾಗಿ ವಿಧೇಯಕ ಮಂಡಿಸುವಂತೆ ಒತ್ತಾಯಿಸಿ ೧೦೦ ಬೈಕ್ ಜಾಥಾ ಜನಾಂದೋಲನವು ನಡೆಯಲಿದೆ. ನಂತರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೈಕ್ ಜಾಥಾ ಸಂಚರಿಸಿಕೊಂಡು ಬೆಳಗಾವಿ ಸುವರ್ಣ ಸೌಧದ ಎದುರು ಡಿ.೧೪ರಂದು ಧರಣಿ ನಡೆಸಲಾಗುವುದು ಎಂದು ತಿಳಿಸಿದರು.
ಮುಖಂಡರಾದ ಪಾಂಡು ಪೂಜಾರಿ, ಸತೀಶ ಮಾದರ, ಗ್ಯಾನಪ್ಪ ಚಲವಾದಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net