

ಬಾಗಲಕೋಟೆ: : ಶಿಕ್ಷಕರು ಬಹಳ ತಾಂತ್ರಿಕ ಶೈಲಿಯಲ್ಲಿ ಉಪನ್ಯಾಸಗಳ ಮೂಲಕ ಪರಿಕಲ್ಪನೆಗಳನ್ನು ವಿವರಿಸುವ ಬದಲು ತಮ್ಮ ತರಗತಿಗಳನ್ನು ಯಾವಾಗಲೂ ಆಸಕ್ತಿದಾಯಕ ಮತ್ತು ವಿನೋದಮಯವಾಗಿ ಮಾಡಿದಾಗಲೇ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣುವರು ಎಂದು ನಿವೃತ್ತ ಮುಖ್ಯ ಗುರು ಎಸ್.ಆರ್.ವಸöದ ಹೇಳಿದರು.
ಗುಡೂರ ಎಸ್.ಸಿ ಗ್ರಾಮದ ಜಗದಂಬಾದೇವಿ ನೂತನ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸರ್ಕಾರಿ ಕನ್ನಡ ಹಿರಿಯ ಗಂಡು ಮಕ್ಕಳ ಹಾಗೂ ಹೆಣ್ಣು ಮಕ್ಕಳ ಶಾಲೆ, ಎಂ.ಜಿ.ವಿ.ಸಿ ಶಾಲೆ, ಖೋಡೆ ಈಶ್ವರಸಾ ಪ್ರೌಢಶಾಲೆಯ ೨೦೦೧-೨೦೦೨ ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ನೇಹ ಸಮ್ಮೀಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದ್ಯಾರ್ಥಿಗಳ ಏಳಿಗೆಗಾಗಿ ಪ್ರತಿಯೊಬ್ಬ ಶಿಕ್ಷಕರು ತಾಂತ್ರಿಕ ಶೈಲಿಯೊಂದಿಗೆ ಗುರುಕುಲ ಮಾದರಿಯಲ್ಲಿ ಅಭ್ಯಾಸ ಮಾಡಿಸಬೇಕು. ಅಲ್ಲದೆ ಎಲ್ಲ ಸಮಯದಲ್ಲೂ ವಿದ್ಯಾರ್ಥಿಗಳನ್ನು ಹೆಚ್ಚು ತೊಡಗಿಸಿಕೊಳ್ಳಲು ಮತ್ತು ಎಚ್ಚರಗೊಳಿಸಲು ಆಟ ಆಧಾರಿತ ಕಲಿಕೆ ಮತ್ತು ಸ್ಪರ್ಧೆಗಳನ್ನು ಸೇರಿಸಲು ಪ್ರಯತ್ನಿಸಿದಾಗ ವಿದ್ಯಾರ್ಥಿಗಳಲ್ಲಿ ಪರಸ್ಪರ ಸಂವಹನ ನಡೆಸಲು ಅವಕಾಶ ನೀಡಿದಂತಾಗುತ್ತದೆ ಎಂದರು.
ನಿವೃತ್ತ ಶಿಕ್ಷಕ ಎ.ಎಸ್.ಗಂಜಿಹಾಳ ಮಾತನಾಡಿ, ನೀವು ಉದ್ಘಾಟನೆಗೆ ಬೆಳಗಿಸಿದ ಜ್ಯೋತಿಯಂತೆ ಸದಾ ನಿಮ್ಮ ಬದುಕು ಪ್ರಜ್ವಲಿಸಲಿ. ಆ ಜ್ಯೋತಿಯನ್ನು ಹಚ್ಚಲು ಮೇನದ ಬತ್ತಿ ಅವಶ್ಯ. ಹಾಗೆ ಜ್ಯೋತಿಯಿಂದ ಜ್ಯೋತಿಯಂತೆ ನೀವು ಸಹ ಮುಂದಿನ ಜನಾಂಗದ ಯುವಕ ಯುವತಿಯರಿಗೆ ಬೇಳಕಾಗಬೇಕಾಗಿದೆ ಎಂದು ತಿಳಿಸಿದರು.
ನಿವೃತ್ತ ಶಿಕ್ಷಕ ಎ.ಎ.ಬದಿ ಹಾಗೂ ಗುರುರಾಜ ಚಿನಿವಾಲರ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲಾ ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ೨೦೦೧-೦೨ ನೇ ಸಾಲಿನ ವಿದ್ಯಾರ್ಥಿಗಳು ಸನ್ಮಾನ ಮಾಡಿ ಗೌರವಿಸಿದರು. ಜೊತೆಗೆ ವಿಧ್ಯಾರ್ಥಿಗಳು ತಮ್ಮ ಹಳೆಯ ನೆನಪು ಮೆಲುಕು ಹಾಕಿದರು.
ಕಾರ್ಯಕ್ರಮದಲ್ಲಿ ವಿಜಯ ರೋಣದ., ಮಂಜುನಾಥ ಪಾಟೀಲ, ಹುಸೇನಸಾಬ ಲಾಲಕೋಟಿ, ಅನುರಾಧಾ ದೊಡಮನಿ, ಸೈರಾಬಾನು ಮುಜಾವಾರ, ಪ್ರೇಮಾ ಕೂಡ್ಲಪ್ಪನವರ., ಮಂಜುನಾಥ ಬಳಿಗಾರ, ಪವನ ಪವಾರ, ಬಸವರಾಜ ಗದ್ದಿ, ಮಹಾಂತೇಶ ತಿಪ್ಪನ್ನವರ, ರಮೇಶ ಇಲಾಳ, ಮಹಿಬೂಬಸಾಬ ಗುಡದಾರಿ ಸೇರಿದಂತೆ ಇತರರು ಇದ್ದರು. ಬಸವರಾಜ ಕೆ ಅಂಗಡಿ ನಿರೂಪಿಸಿದರು. ಮಂಜುಳಾ ಬಲಕುಂದಿ ಪ್ರಾರ್ಥಿಸಿದರು. ಶಿವಲಿಂಗಯ್ಯ ಸೂಡಿ ವಂದಿಸಿದರು. ನಾಗರಾಜ ನಾಯಿನೇಗಲಿ ಸ್ವಾಗತಿಸಿದರು. ಸಿದ್ದು ಗಂಜಿಹಾಳ ವಂದಿಸಿದರು.