ವಿನಾಯಕನ ಸ್ವಾಗತಕ್ಕೆ ಭರದ ಸಿದ್ಧತೆ..!

bkt-6-1
ಗಣೇಶ ಉತ್ಸವ ಹಿನ್ನೆಯಲ್ಲಿ ಬಾಗಲಕೋಟೆ ನಗರದ ಮಾರುಕಟ್ಟೆಯಲ್ಲಿ ಹೂಗಳ ಖರೀದಿ.
Published on

ಸಂತೋಷ ದೇಶಪಾಂಡೆ
ಬಾಗಲಕೋಟೆ: ವಿಘ್ನ ನಿವಾರಕ ವಿನಾಯಕನ ಸ್ವಾಗತಕ್ಕೆ, ಗಣೇಶ ಉತ್ಸವ ಅದ್ದೂರಿ ಆಚರಣೆಗೆ ಜಿಲ್ಲಾದ್ಯಂತ ಭರದ ಸಿದ್ಧತೆ ನಡೆದಿದೆ. ಶನಿವಾರ ಪ್ರತಿಷ್ಠಾಪನೆಗೆ ಕೊನೆ ಹಂತದ ಎಲ್ಲ ತಯಾರಿಗಳು ಪೂರ್ಣಗೊಳಿಸಲಾಗಿದೆ. ಕೋಟೆನಾಡಲ್ಲಿ ಸಂಭ್ರಮ-ಸಡಗರ ಮನೆ ಮಾಡಿದೆ.

ಆಚರಣೆ, ತೆಲೆ ತಲಾಂತರದಿಂದ ನಡೆದುಕೊಂಡು ಬಂದ ಪದ್ಧತಿಯಂತೆ ಬಹುತೇಕ ಜನರು ಮನೆ ಮನೆಗಳಲ್ಲಿ ಪ್ರತಿಷ್ಠಾಪಿಸುವುದರ ಜೊತೆಗೆ ವಿವಿಧ ವೃತ್ತ, ಬಡಾವಣೆ, ರಸ್ತೆ ಸೇರಿದಂತೆ ನಾನ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಗಣೇಶನ ಪ್ರತಿಷ್ಠಾಪನೆಗೆ ವಿವಿಧ ಗಣೇಶ ಉತ್ಸವ ಮಂಡಳಿಗಳು, ಸಮಿತಿಗಳು ಸಕಲ ವ್ಯವಸ್ಥೆ ಮಾಡಿಕೊಂಡಿವೆ.

ಪಿಒಪಿ ಗಣೇಶ ಮೂರ್ತಿ ನಿಷೇಽಸಲಾಗಿದ್ದು ಹೀಗಾಗಿ ಮಾರುಕಟ್ಟೆಯಲ್ಲಿ ಮಣ್ಣಿನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಬಹುತೇಕವಾಗಿ ಗಣೇಶ ಮೂರ್ತಿಗಳು ಚಿಕ್ಕ ಚಿಕ್ಕ ಗಣಪತಿ ಮೂರ್ತಿ ಸೇರಿದಂತೆ ದೊಡ್ಡ ದೊಡ್ಡ ಮಣ್ಣಿನ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ಗಣೇಶ ಉತ್ಸವಕ್ಕೆ ಅಗತ್ಯ ಎಲ್ಲ ತಯಾರಿ ಮಾಡಿಕೊಳ್ಳಲು ಮತ್ತು ಹಬ್ಬಕ್ಕೆ ಬೇಕಾದ ವಿವಿಧ ವಸ್ತು, ಹಣ್ಣು ತರಕಾರಿ ಖರೀದಿಗೆ ಮಾರುಕಟ್ಟೆಯಲ್ಲಿ ಜನರು ತಂಡೋಪ ತಂಡವಾಗಿ ಆಗಮಿಸುತ್ತಿರುವ ದೃಶ್ಯ ಶುಕ್ರವಾರ ಜಲ್ಲೆಯ ಎಲ್ಲ ಮಾರುಕಟ್ಟೆಯಲ್ಲಿ ಕಂಡು ಬಂದಿತು. ಜಿಲ್ಲೆಯ ಕೆಲವೆಡೆ ಪಿಒಪಿ ಮೂರ್ತಿಗಳು ಮತ್ತೆ ಮಾರಾಟವಾಗುತ್ತಿರುವುದು ಪರಿಸರ ಪ್ರೇಮಿಗಳಲ್ಲಿ ಬೇಸರ ಮೂಡಿಸಿದೆ.

ಬಾಳೆ ಎಲೆ, ಹಣ್ಣು, ಹೂ, ಕಾಯಿ, ಲೈಟಿಂಗ್ ಸಾಮಾನು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳು ಖರೀದಿಗೆ ಜನರು ಮುಗಿಬಿದ್ದಿದ್ದರು. ಅಲ್ಲದೆ ಪಟಾಕಿ ಖರೀದಿಸಲು ಕೂಡಾ ಸಾರ್ವಜನಿಕರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದರು. ಇನ್ನೂ ಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಮನೆಗಳಲ್ಲಿ ನಾನಾ ರೀತಿಯಲ್ಲಿ ಅಲಂಕಾರಗೊಳಿಸುವ ಕಾರ್ಯವು ನಡೆದಿದೆ.

ಹಬ್ಬದ ಹಿನ್ನಲೆಯಲ್ಲಿ ಎಲ್ಲೆಲ್ಲೂ ಸಂಭ್ರಮ ಸಡಗರ ಮನೆ ಮಾಡಿದೆ. ಮೊದಕಪ್ರಿಯನಿಗೆ ಇಷ್ಟವಾದ ವಿವಿಧ ಖಾದ್ಯಗಳ ತಯಾರಿ ಮಾಡಲಾಗುತ್ತಿದೆ. ವಿವಿಧ ಭಾಗದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಗಣೇಶ ಉತ್ಸವ ಅಂಗವಾಗಿ ಗಣ ಹೋಮ, ವಿವಿಧ ಪೂಜಾ ಕೈಂಕರ್ಯ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಶನಿವಾರ ಬೆಳಗ್ಗೆಯಿಂದಲೇ ಆರಂಭವಾಗುವ ಗಣೇಶ ಪ್ರತಿಷ್ಠಾಪನೆ ಸಂಜೆವರೆಗೂ ಅದ್ಧೂರಿಯಾಗಿ ಜರುಗಲಿದೆ. ಗಲ್ಲಿ ಗಲ್ಲಿ, ಬೀದಿ ಬೀದಿಗಳಲ್ಲಿ ಗಣಪತಿ ಬಪ್ಪ ಮೋರಯಾ ಸೇರಿದಂತೆ ವಿವಿಧ ಘೋಷನೆಗಳು ಮೊಳಗಲಿವೆ. ಎಲ್ಲೆಡೆ ಶಾಂತಿ, ಸೌಹಾರ್ದಯುತವಾಗಿ ಆಚರಣೆಗೆ ಪೊಲೀಸ ಇಲಾಖೆ, ಜಿಲ್ಲಾಡಳಿತ ಶಾಂತತಾ ಸಭೆ ನಡೆಸಿ ಮನವಿ ಮಾಡಿದೆ. ಅಲ್ಲದೆ ಅಗತ್ಯ ಬಿಗಿ ಪೊಲೀಸ ಬಂದೋ ಬಸ್ತ ಕಲ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net