ವಿದ್ಯುತ್ ಸ್ಪರ್ಶದಿಂದ ಕರ್ತವ್ಯ ನಿರತ ಲೈನ್‌ಮ್ಯಾನ್ ಸಾವು

Published on



ವಿಜಯವಾಣಿ ಸುದ್ದಿಜಾಲ ಅಫಜಲಪುರ (ಕಲಬುರಗಿ)
ವಿದ್ಯುತ್ ಸ್ಪರ್ಶದಿಂದ ಕರ್ತವ್ಯನಿರತ ಲೈನ್‌ಮಾನ್ ಮೃತಪಟ್ಟ ಘಟನೆ ಶುಕ್ರವಾರ ತಾಲೂಕಿನ ತೆಲ್ಲೂರ ಹಾಗೂ ಬಟಗೇರಾ ಗ್ರಾಮಗಳ ಮಧ್ಯೆ ನಡೆದಿದೆ.
ತೆಲ್ಲೂರ ಹಾಗೂ ಬಟಗೇರಾ ಗ್ರಾಮಗಳ ಮಧ್ಯೆ ವಿದ್ಯುತ್ ಸಂಪರ್ಕದ ಸಮಸ್ಯೆ ಸರಿಪಡಿಸಲು ಚೌಡಾಪುರ  ಸ್ಟೇಷನ್‌ನಿಂದ ಎಲï‌ಸಿ ತೆಗೆದುಕೊಂಡು ಕೆಲಸ ನಿರ್ವಹಿಸುತ್ತಿz್ದÁಗ ಏಕಾಏಕಿ ವಿದ್ಯುತ್ ಪ್ರವಹಿಸಿದಾಗ ಲೈನ್‌ಮ್ಯಾನ್ ಸಂತೋಷ ಬಸವರಾಜ ಬಿಜ್ಜಾ (೨೬) ಮೃತಪಟ್ಟಿz್ದÁರೆ.
ಸುದ್ದಿ ತಿಳಿಯುತ್ತಿದ್ದಂತೆ ಘಟನಾ ಸ್ಥಳದಲ್ಲಿ ಶವವನ್ನು ಇಟ್ಟು ರೈತ ಹೋರಾಟಗಾರ ಕೇದಾರಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ಹುಲ್ಲೂರು ಗ್ರಾಮಸ್ಥರು ಹಾಗೂ ರೈತರು ಚೌಡಾಪುರದ ರಾಷ್ಟಿçÃಯ ಹೆz್ದÁರಿ ಬಂದ್ ಮಾಡಿ ಮಿಂಚಿನ ಪ್ರತಿಭಟನೆ ನಡೆಸಿ ಘಟನೆಗೆ ಕಾರಣರಾದ ಎಸ್‌ಒ,ಇಇ, ಎಇಇ ಅವರನ್ನು ಕೂಡಲೇ ಅಮಾನತು ಮಾಡಿ ಮೃತನ ಕುಟುಂಬಕ್ಕೆ ಸರ್ಕಾರದಿಂದ ಒಂದು ಕೋಟಿ ರೂ. ಪರಿಹಾರ ಹಾಗೂ ಉದ್ಯೋಗ ಕೊಡಬೇಕು ಆಗ್ರಹಿಸಿದರು. ಎರಡು ಗಂಟೆವರೆಗೆ ರಸ್ತೆ ಬಂದ್ ಮಾಡಿದ್ದರಿಂದ ಸಂಚಾರಕ್ಕೆ ತೊಂದರೆಯಾಯಿತು.
ಈ ದುರ್ಘಟನೆ ಉz್ದೆÃಶಪೂರ್ವಕವಾಗಿಯೇ ನಡೆದಿದೆ ಎಂದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆರೋಪಿಸಿದರು.
 ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ವೈ.ಪಾಟೀಲï ಮಾತನಾಡಿ, ಇಡೀ ನಾಡಿಗೆ ಬೆಳಕು ನೀಡುವ ಪವರ್ ಮ್ಯಾನ್ ಸಂತೋಷನ ಬದುಕು ಸಣ್ಣ ವಯಸ್ಸಿನಲ್ಲಿ ಕತ್ತಲಾಗಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಜೀವವನ್ನು ಮರಳಿ ತರಲಾಗುವುದಿಲ್ಲ. ಅವರ ಕುಟುಂಬದ ಜತೆಗೆ ನಾವಿz್ದÉÃವೆ ಎಂದು ಸಮಾಧಾನಪಡಿಸಿದರು.
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಮಾತನಾಡಿ,  ದುರ್ಘಟನೆಗೆ ಕಾರಣರಾದ ಜವಾಬ್ದಾರಿಯುತ ಹುz್ದÉಯಲ್ಲಿರುವ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಜೆಸ್ಕಾಂ ಎಂಡಿ ರಾಹುಲï ಪಾಂಡ್ವೆ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ತಿಳಿಸಿದರು.
ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ಸಂತೋಷ ಬಿಜ್ಜೆ ಕುಟುಂಬದ ಆಧಾರ ಸ್ತಂಭವಾಗಿದ್ದ, ಅವರ ಅಕಾಲಿಕ ಮರಣವು ಆಘಾತವಾಗಿದೆ. ಈ ಪ್ರಕರಣವನ್ನು ತನಿಖೆ ನಡೆಸಿ ಘಟನೆಗೆ ಕಾರಣದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲಾಖೆಯಿಂದ ಬರುವ ಪರಿಹಾರದ ಮೊತ್ತದ ಜತೆಗೆ ಸರ್ಕಾರದಿಂದ ಹೆಚ್ಚಿನ ಮೊತ್ತದ ಅನುದಾನ ನೀಡಬೇಕು. ಎಸ್‌ಒ ಹಾಗೂ ಎಇಇ ಅವರ ಬೇಜವಾಬ್ದಾರಿತನವೇ ಈ ಘಟನೆಗೆ ಕಾರಣವಾಗಿದೆ ಎಂದು ಕಿಡಿಕಾರಿದರು.
ಶಾಸಕ ಬಿ.ಆರ್.ಪಾಟೀಲï, ಪ್ರಮುಖರಾದ ಅರುಣಕುಮಾರ.ಎಂ.ವೈ.ಪಾಟೀಲï, ತಹಸೀಲ್ದಾರ್ ಸಂಜೀವಕುಮಾರ ದಾಸರ, ಡಿವೈಎಸ್ಪಿ ಆರ್.ಗೋಪಿ, ಮುಖ್ಯ ಇಂಜಿನಿಯರ್ ಚಂದ್ರಶೇಖರ, ಸಿಪಿಐ ರಾಜಶೇಖರ ಬಡದೇಸರ, ಪಿಎಸ್‌ಐ ಗಂಗಮ್ಮ ಮೃತನ ಸಂಬAಧಿಕರು ಹಾಗೂ ಹುಲ್ಲೂರ ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net