ವಿದ್ಯುತ್ ಚಾಲಿತ ಬೈಕ್ ಕೊಡುಗೆ

ವಿದ್ಯುತ್ ಚಾಲಿತ ಬೈಕ್ ಕೊಡುಗೆ
Published on

ಗುಂಡ್ಲುಪೇಟೆ: ಬಂಡೀಪುರ ಅರಣ್ಯ ಪ್ರದೇಶದ ಗಸ್ತು ಹೆಚ್ಚಿಸುವ ಸಲುವಾಗಿ ಅಡವಿ ಫೌಂಡೇಶನ್ ಸಂಸ್ಥೆ ಎರಡು ವಿದ್ಯುತ್ ಚಾಲಿತ ಬೈಕ್‌ಗಳನ್ನು ಅರಣ್ಯ ಇಲಾಖೆಗೆ ಕೊಡುಗೆಯಾಗಿ ನೀಡಿದೆ.

ಶುಕ್ರವಾರ ಸಂಜೆ ಬಂಡೀಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಬೈಕ್‌ಗಳನ್ನು ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಅವರಿಗೆ ಹಸ್ತಾಂತರ ಮಾಡಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಪಿ.ನವೀನ್ ಕುಮಾರ್, ಆರ್‌ಎಫ್‌ಒ ಮಲ್ಲೇಶ, ಮಹದೇವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net