ಕಲಬುರಗಿ ನಗರದ ಐವಾನ್-ಇ-ಶಾಹಿ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳ ಕೊರಳಲ್ಲಿನ ಚಿನ್ನದ ಸರವನ್ನು ಬೈಕ್ ಮೇಲೆ ಬಂದ ಆಗಂತುಕರು ಸುಲಿಗೆ ಮಾಡಿ ಕಿತ್ತುಕೊಂಡು ಪರಾರಿದ ಘಟನೆ ನಡೆದಿದೆ.
ನಾಗವೇಣಿ ಗೊಂಘಡೆ ಎಂಬುವರ ೫ ಗ್ರಾಂ ಚಿನ್ನದ ಸರವನ್ನು ಸುಲಿಗೆ ಮಾಡಿಕೊಂಡು ಹೋಗಿದ್ದಾರೆ. ಪ್ರಿಯಾಂಕಾ ಕಾಲೇಜೊಂದರಲ್ಲಿ ಬಿಕಾಂ ಓದುತ್ತಿದ್ದು ಮಾಲಗತ್ತಿ ಗ್ರಾಮದವರು. ಸ್ನೇಹಿತೆ ಉಮಾಭಾರತಿ ಜತೆಗೆ ಬೇಕರಿಗೆ ಹೋಗಿ ಬರುವಾಗ ಬೈಕ್‌ನಲ್ಲಿ ಬಂದ ಕಳ್ಳರು ಕಿತ್ತುಕೊಂಡು ಖರ್ಗೆ ಅವರ ಮನೆಯ ಕಡೆಗೆ ಹೋದರು ಎಂದು ದೂರಿದ್ದಾರೆ. ಈ ಕುರಿತು ಸ್ಟೇಷನ್ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.