ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು !

sumnna
ಸುಮನ ಪತ್ತಾರ
Published on

ಬಾಗಲಕೋಟೆ: ಬಾಗಲಕೋಟೆ ತಾಲೂಕಿನ ಶಿಗಿಕೇರಿ ಕ್ರಾಸ್‌ನ ಬೃಹತ ಸೇತುವೆ ಕೆಳಗಡೆ ಮುಳ್ಳುಕಂಟಿಯಲ್ಲಿ ಯುವತಿ ಒಬ್ಬರ ಶವ ಶನಿವಾರ ಪತ್ತೆಯಾಗಿದೆ.

ಯುವತಿಯ ಶವ ಅನಾಮಾನ ಮೂಡಿಸಿದ್ದು, ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎನ್ನುವುದು ಇನ್ನು ಖಚಿತವಾಗಿಲ್ಲ. ಪತ್ತೆ ಆಗಿರುವ ಯುವತಿಯ ಶವ ಇಳಕಲ್ಲ ಮೂಲದ ಸುಮನ್ ಮನೋಹರ ಪತ್ತಾರ(೨೨) ಎನ್ನುವವರದ್ದು ಎಂದು ಗುರುತಿಸಲಾಗಿದೆ. ಸುಮನ ಪತ್ತಾರ ಬಾಗಲಕೋಟೆ ಖಾಸಗಿ ಮೆಡಿಕಲ್ ಕಾಲೇಜ್‌ನಲ್ಲಿ ೩ನೇ ವರ್ಷದ ಪಿಜಿಯೋಥೆರಪಿ ವ್ಯಾಸಂಗ ಮಾಡುತ್ತಿದ್ದು, ಹಾಸ್ಟೆಲನಲ್ಲಿ ವಾಸ ಇದ್ದಳು. ಎರಡು ದಿನಗಳ ಹಿಂದೆ ಬೆಳಗ್ಗೆ ಹಾಸ್ಟೆಲ್ ನಿಂದ ಹೋಗಿದ್ದ ವಿದ್ಯಾರ್ಥಿನಿ ವಾಪಸ್ಸು ಬಂದಿರಲಿಲ್ಲ. ವಿದ್ಯಾರ್ಥಿನಿ ಕಾಣೆ ಆಗಿರುವ ಬಗ್ಗೆ ಪಾಲಕರು ಬಾಗಲಕೋಟೆ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಶನಿವಾರ ರೈಲ್ವೆ ಬ್ರಿಡ್ಝ ಕೆಳಗಡೆ ಮುಳ್ಳು ಕಂಟಿಯಲ್ಲಿ ಶವ ಪತ್ತೆಯಾಗಿದೆ.

ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ ವ್ಯಕ್ತಪಡಿಸಿದ್ದು, ದೂರು ಆಧರಿಸಿ ತನಿಖೆ ನಡೆಸಲಾಗುವುದು ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net