ವಿದ್ಯಾರ್ಥಿಗಳು-ಪಾಲಕರು ಆಕ್ರೋಶ

bkt-20-7
ಬಾಗಲಕೋಟೆ ನಗರ ಬಿಟಿಡಿಎ ಆವರಣದಲ್ಲಿರುವ ಆರ್.ಎಂ.ಎಸ್ ಪ್ರೌಢಶಾಲೆಯ ಹಾಲ್ ಟಿಕೆಟ್ ವಂಚಿತ ವಿದ್ಯಾರ್ಥಿಗಳು.
Published on

ಬಾಗಲಕೋಟೆ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಲ್ ಟಿಕೆಟ್ ನೀಡಲು ನಿರಾಕರಣೆ ಮಾಡಿದಕ್ಕೆ, ಪರೀಕ್ಷೆಗೆ ಉದ್ದೇಶಪೂರ್ವಕವಾಗಿ ವಂಚನೆ ಮಾಡಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು, ಪಾಲಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಗುರುವಾರ ಬಿಟಿಡಿಎ ಆವರಣದಲ್ಲಿರುವ ಆರ್.ಎಂ.ಎಸ್.ಎ ಪ್ರೌಢಶಾಲೆಯಲ್ಲಿ ನಡೆದಿದೆ.

ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಲಿದ್ದು, ಈ ಶಾಲೆಯ ಎಂಟು ಜನ ವಿದ್ಯಾರ್ಥಿಗಳಿಗೆ ಹಾಜರಾತಿ ಕಡಿಮೆ ಇದೆ ಎನ್ನುವ ಕಾರಣಕ್ಕೆ ಶಾಲೆಯ ಮುಖ್ಯ ಶಿಕ್ಷಕಿ ಹಾಲ್ ಟಿಕೆಟ್ ನೀಡಲು ನಿರಾಕರಣೆ ಮಾಡಿದ್ದಾರೆ ಅಂತ ಹೇಳುತ್ತಿದ್ದಾರೆ. ನಿತ್ಯದ ಬಿಸಿಯೂಟದ ಹಾಜರಿಯಲ್ಲಿ ಮಕ್ಕಳ ಹಾಜರಾತಿ ಇದೆ. ಮುಖ್ಯ ಶಿಕ್ಷಕಿ ಜಿ.ಎಸ್.ಖೋತ ಸುಳ್ಳು ಹೇಳುತ್ತಿದ್ದಾರೆ. ಮಕ್ಕಳು ಅಭ್ಯಾಸದಲ್ಲಿ ವೀಕ್ ಇದ್ದಾರೆ. ಪರೀಕ್ಷೆಯಲ್ಲಿ -ೆÃಲ್ ಆದರೇ ಶಾಲೆಗೆ ಕಳಂಕ ತರುತ್ತಾರೆ. ಆದ್ದರಿಂದ ಹೀಗೆ ಮಕ್ಕಳಿಗೆ ವಂಚನೆ ಮಾಡಿದ್ದಾರೆ. ಇದರಿಂದ ಮಕ್ಕಳ ಭವಿಷ್ಯ ಸಂಪೂರ್ಣ ಹಾಳಾಗಿದೆ ಎಂದು ಮುಖ್ಯ ಶಿಕ್ಷಕಿ ಖೋತ್ ಜೊತೆಗೆ ವಾಗ್ವಾದ ನಡೆಸಿದರು. ಅಲ್ಲದೆ ವಿದ್ಯಾರ್ಥಿಗಳು, ಪಾಲಕರು ಕಣ್ಣೀರು ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ೮ ಜನ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಇದೆ. ಈ ಬಗ್ಗೆ ಮೇಲಾಽಕಾರಿಗಳಿಗೆ ವರದಿ ಸಲ್ಲಿಸಿದ್ದೇವೆ. ಆ ಪ್ರಕಾರ ಆನ್‌ಲೈನ್ ಪ್ರಕ್ರಿಯೆಯಲ್ಲಿ ಹಾಲï ಟಿಕೆಟ್‌ಗೆ ಅವರು ಅರ್ಹರಾಗಿಲ್ಲ. ಎರಡನೇ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು. ಉದ್ದೇಶಪೂರ್ವಕವಾಗಿ ಹಾಜರಾತಿ ಕಡಿಮೆ ತೋರಿಸಿಲ್ಲ. ಅದು ಸುಳ್ಳು ಆರೋಪ ಎಂದರು.

ಕೊನೆಗೆ ಬಾಗಲಕೋಟೆ ಕ್ಷೇತ್ರ ಶಿಕ್ಷಣಾಽಕಾರಿ ಎಂ.ಎಸ್.ಬಡದಾನಿ ಭೇಟಿ ನೀಡಿ ಮಕ್ಕಳು, ಪಾಲಕರನ್ನು ಸಮಾಧಾನ ಪಡಿಸಿದರು. ಮುಂದಿನ ಜೂನ್‌ನಲ್ಲಿ ನಡೆಯುವ ಪರೀಕ್ಷೆಗೆ ಅವಕಾಶ ದೊರೆಯಲಿದೆ ಎಂದು ಭರವಸೆ ನೀಡಿದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net