

ಅಥಣಿ: ಇಳಕಲ್ಲದ ಲಿಂಗೈಕ್ಯ ಡಾ.ಮಹಾಂತ ಶಿವಯೋಗಿಗಳು ಜನರ ದುಶ್ಚಟ ತೊಲಗಿಸಿ ವ್ಯಸನಮುಕ್ತ ಸಮಾಜ ನಿರ್ಮಿಸುವುದಕ್ಕಾಗಿ ಜೀವನ ಮುಡುಪಾಗಿಟ್ಟಿದ್ದರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಎನ್.ಎಲ್.ಬಣಜವಾಡ, ಬಸವ ಗ್ಲೋಬಲ್ ೌಂಡೇಷನ್ ಹಾಗೂ ತಾಲೂಕಾಡಳಿತ ಸಹಯೋಗದಲ್ಲಿ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಯುವಕರು ಮತ್ತು ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು , ಬದುಕು ರೂಪಿಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು. ಮಹಾಂತ ಶಿವಯೋಗಿಗಳು ಜೋಳಿಗೆ ಹಿಡಿದು ಹಳ್ಳಿಹಳ್ಳಿಗಳಲ್ಲಿ ಸಂಚರಿಸಿ, ಜನರಲ್ಲಿ ದುಶ್ಚಟಗಳ ಬಗ್ಗೆ ಜನಜಾಗೃತಿ ಮೂಡಿಸಿದ ಅಪರೂಪದ ಸಂತ ಎಂದರು.
ಬಣಜವಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಲಕ್ಷ್ಮಣ ಬಣಜವಾಡ ಮಾತನಾಡಿ, ವ್ಯಸನಮುಕ್ತ ಸಮಾಜ ನಿರ್ಮಾಣ ಮಾಡಲು ವಚನಕಾರರ ತೋರಿದ ದಾರಿಯಲ್ಲಿ ನಡೆಯಬೇಕು ಎಂದರು.
ನ್ಯಾಯವಾದಿ ಸಂಘದ ಅಧ್ಯಕ್ಷ ಎ.ಎಸ್.ಹುಚಗೌಡರ, ಹಿರಿಯ ನ್ಯಾಯವಾದಿ ಕೆ.ಎಲ್.ಕುಂದರಗಿ, ಎ.ಎಂ.ಖೊಬ್ರಿ, ಶಿವಪುತ್ರ ಯಾದವಾಡ, ಅನಿತಾ ಬಣಜವಾಡ, ಮುರುಘೇಶ ಬಾನಿ, ಮುತ್ತಣ್ಣ ಸಂತಿ, ಸಂಗಣ್ಣ ಗೂಗವಾಡ, ಕಲ್ಲಪ್ಪ ವನಜೋಳ, ಧರೆಪ್ಪ ಠಕ್ಕಣವರ, ರಾಚಗೌಡ ಪಾಟೀಲ, ರಾಗಿಣಿ ಪಾಟೀಲ ಇತರರಿದ್ದರು.