ವಿದ್ಯಾರ್ಥಿಗಳು ಕೌಶಲ ಕರಗತ ಮಾಡಿಕೊಳ್ಳಲಿ

09
Published on

ನಿಪ್ಪಾಣಿ: ಸಾಫ್ಟ್‌ವೇರ್ ಕಂಪನಿಗಳಲ್ಲಿ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಅವುಗಳಿಗೆ ಬೇಕಾದ ಕೌಶಲ ಕರಗತ ಮಾಡಿಕೊಳ್ಳಬೇಕು ಎಂದು ಕ್ಯಾಪ್ ಜೆಮಿನಿ ಕಂಪನಿ ನಿರ್ದೇಶಕ ಬಿ.ಕೆ.ಪ್ರಸನ್ನವದನ ಹೇಳಿದರು.

ಸಮೀಪದ ವಿಎಸ್‌ಎಂ ಸೋಮಶೇಖರ ಆರ್.ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ತಾಂತ್ರಿಕ ಪ್ರವೃತ್ತಿಗಳು-2025’ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿ, ಸೋತವರು ಹತಾಶೆಗೊಳ್ಳದೆ ಪುಟಿದೇಳಬೇಕು ಎಂದರು.

ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಜೀವನದಲ್ಲಿ ನಿರಾಶೆಗೊಳ್ಳದೆ ಮುಂದೆ ಸಾಗುತ್ತಿರಬೇಕು. ಕೆಲಸದಲ್ಲಿ ಹಿಂಜರಿಯದೇ ಧೈರ್ಯದಿಂದ ಪ್ರಯತ್ನಿಸಬೇಕು. ಇದೇ ಯಶಸ್ಸಿನ ಗುಟ್ಟು ಎಂದು ತಿಳಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಪಪ್ಪು ಪಾಟೀಲ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ಉಪಾಧ್ಯಕ್ಷ ರಜತ ಢೋಲೆ, ಸಿಇಒ ಡಾ. ಸಿದ್ಧಗೌಡ ಪಾಟೀಲ ಮಾತನಾಡಿದರು. ಸಂಚಾಲಕ ರಾವಸಾಹೇಬ ಪಾಟೀಲ, ಸಚಿನ ಹಾಲಪ್ಪನವರ, ಬಿ.ಎಸ್.ಕೃಷ್ಣಮೂರ್ತಿ, ಸೌಮ್ಯ ರಾಯ್, ಪ್ರೊ. ಕವಿತಾ ವಸೇದಾರ, ಸಂತೋಷ ಕೋಳಕಿ, ರಾಹುಲ ಪಾಲಕರ, ಅನುಪ ಗಂಜಿ, ರಾಕೇಶಕುಮಾರ ಇತರರಿದ್ದರು. ಗೌರವ ಗಚ್ಚಿ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಉಮೇಶ ಪಾಟೀಲ ಪರಿಚಯಿಸಿದರು. ಡಾ. ಪ್ರಭಾಕರ ಮುತಾಲಿಕದೇಸಾಯಿ ಸ್ವಾಗತಿಸಿದರು. ಪ್ರೊ. ಮಾಧವಿ ಅವಳೇಕರ ನಿರೂಪಿಸಿದರು. ರೋಹಿತ ಪಾಟೀಲ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net