

ಬೈಲಹೊಂಗಲ: ತಾಲೂಕಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳಾದ ಬಿಸಿಎಂ ಹಾಗೂ ಡಿಟಿಯ ಬೈಲಹೊಂಗಲ, ನಯಾನಗರ, ದೊಡವಾಡ, ಚನ್ನಮ್ಮನ ಕಿತ್ತೂರು, ಸಂಪಗಾಂವಿ, ಬೈಲವಾಡ, ನೇಸರಗಿ, ದೇಶನೂರು, ಹುಣಶಿಕಟ್ಟಿ, ತುರಕರಶೀಗಿಹಳ್ಳಿ ಹಾಗೂ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಬೈಲಹೊಂಗಲ ಸೇರಿ ಒಟ್ಟು 12 ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರವರ್ಗ-1, 2ಎ, 2ಬಿ, 3ಎ, 3ಬಿ, ಪ.ಜಾ, ಪ.ಪಂ ಮತ್ತು ಇತರ ಜಾತಿಗೆ ಸೇರಿದ 5 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಜೂ. 16ರೊಳಗಾಗಿ ವೆಬ್‌ಸೈಟ್‌ಠಿಠಿ://.ಚ್ಟ್ಞಠಿ.ಜಟ.ಜ್ಞಿ/ಚ್ಚಿಡಿ ಮೂಲಕ ಅರ್ಜಿ ಸಲ್ಲಿಸುವಂತೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.