ಬಾಗಲಕೋಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ವಿದ್ಯಾರ್ಜನೆ ವಿನೂತನವಾಗಿರಬೇಕೆಂದು ಶ್ರೀಮತಿ ಜಾನಕಿ ಕೆ ಎಂ ತಿಳಿಸಿದರು.
ನಗರದ ಎಂ ಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಬಿಎಎಂಎಸ್ ನ ವಿದ್ಯಾರ್ಥಿಗಳಿಗೆ ನಡೆದ ಶಿಷ್ಯೋಪನಯನ ಪೂಜಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಾಗಲಕೋಟೆಯ ಜಿಲ್ಲಾಧಿಕಾರಿಗಳಾದ ಶ್ರೀಮತಿ ಜಾನಕಿ ಕೆ ಎಂ ಅವರು ವಿದ್ಯಾರ್ಜನೆ ವಿನೂತನವಾಗಿದ್ದಾಗ ಮಾತ್ರ ವಿದ್ಯಾರ್ಥಿಗಳು ಮಹತ್ತರ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಶ್ರೀಮಂತ ಪ್ರಾಚೀನ ಪರಂಪರೆಯನ್ನು ಹೊಂದಿರುವಂತಹ ಭಾರತದಲ್ಲಿ ಗುರು ಶಿಷ್ಯರ ಪರಂಪರೆಗೆ ಕೊನೆಯೆಂಬುದೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಈ ರೀತಿಯ ಕಾರ್ಯಕ್ರಮಗಳ ಆಯೋಜನೆ ನಡೆಯುತ್ತದೆ. ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಆಯುರ್ವೇದದ ಯಶಸ್ವಿಗಾಗಿ ಶ್ರಮಿಸಲು ಕಂಕಣ ಕಟ್ಟಿಕೊಳ್ಳುವುದರ ಮೂಲಕ ಪ್ರಮಾಣಿಕರಿಸಿದ್ದು ವಿಶೇಷವಾಗಿತ್ತು.
ಈ ಸಂದರ್ಭ ಆಡಳಿತ ಅಧಿಕಾರಿಯಾದ ಡಾ.ಶಿವಕುಮಾರ ಗಂಗಾಲ, ಹಿರಿಯ ಪ್ರಾಧ್ಯಾಪಕರುಗಳಾದ ಡಾ. ವಿಜಯಕುಮಾರ್ ಚವಡಿ, ಡಾ.ಈಶ್ವರ್ ಪಾಟೀಲ್, ಡಾ.ದೀಪಾ ಗಂಗಾಲ, ಡಾ.ಸಂಜಯ್ ಚೀನಿವಾಲ್, ಡಾ. ಮನೋಹರ್ ಸಾರಂಗಿ, ಡಾ.ರಜನಿ ದಡೆದ, ಡಾ.ವಿದ್ಯಾಶ್ರೀ, ಡಾ.ಮಹಾಂತೇಶ್ಹಾ ಜರಿದ್ದರು.