ವಿದೇಶಿಗರಿಂದ ಕಡ್ಲೆ ಶಾಲೆಗೆ ದೇಣಿಗೆ

rupess
Published on

ಕುಮಟಾ: ತಾಲೂಕಿನ ಹೊಲನಗದ್ದೆಯ ಕಡ್ಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಜರ್ಮನಿ ಹಾಗೂ ಆಸ್ಟಿ್ರಾ ದೇಶದ ಪ್ರಜೆಗಳಿಬ್ಬರು ಒಟ್ಟು 2.57 ಲಕ್ಷ ರೂ. ದೇಣಿಗೆ ಕಳುಹಿಸಿದ್ದಾರೆ.

ಈ ಶಾಲೆಗೆ ಸನಿಹದ ಅಶ್ವಿನಿಧಾಮ ಆಯುರ್ವೆದ ಆಸ್ಪತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಬಂದು ಚಿಕಿತ್ಸೆ ಪಡೆಯುತ್ತಾರೆ. ಇತ್ತೀಚೆಗೆ ಚಿಕಿತ್ಸೆ ಪಡೆದು ಸ್ವದೇಶಕ್ಕೆ ಮರಳಿದ ಜರ್ಮನಿ ಹಾಗೂ ಆಸ್ಟಿ್ರಾದವರು ಅಶ್ವಿನಿಧಾಮದ ಡಾ. ರವಿರಾಜ ಕಡ್ಲೆ ಸಲಹೆಯಂತೆ ಸ್ಥಳೀಯ ಸರ್ಕಾರಿ ಶಾಲೆಗೆ ದೇಣಿಗೆ ಮೊತ್ತವನ್ನು ಶಾಲೆಯ ಖಾತೆಗೆ ಸಂದಾಯ ಮಾಡಿದ್ದಾರೆ. ವಿದೇಶಿಗರು ನೀಡಿದ ಹಣವನ್ನು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ವಿನಿಯೋಗಿಸುವುದಾಗಿ ಕಡ್ಲೆ ಶಾಲಾಭಿವೃದ್ಧಿ ಸಮಿತಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net