ವಿದೇಶಿ ಪ್ರಜೆಗಳ ಜೊತೆ ಮಹಿಳೆಯರ ಹೋಳಿ ಸಂಭ್ರಮ

20250314_192710
ಬಾದಾಮಿ ಪಟ್ಟಣದಲ್ಲಿ ಶುಕ್ರವಾರ ಅಲ್ಲಿನ ಯುವತಿಯರು ವಿದೇಶಿ ಪ್ರಜೆಗಳ ಜೊತೆಗೆ ಬಣ್ಣದೋಕುಳಿಯಾಡಿ ಹಲಿಗೆ ಬಾರಿಸುತ್ತ ಹೆಜ್ಜೆ ಹಾಕಿದರು.
Published on

ಬಾಗಲಕೋಟೆ: ಹೋಳಿ ಹಬ್ಬದ ಆಚರಣೆಯಲ್ಲಿ ಪ್ರಸಿದ್ಧವಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಬಣ್ಣದೋಳುಕಿಯಲ್ಲಿ ಜನರು ಮಿಂದೇಳುವುದು ಸಾಮಾನ್ಯ. ಮಕ್ಕಳು, ಮಹಿಳೆಯರು, ವೃದ್ಧರು ಸಹ ಬಣ್ಣದಾಟದಲ್ಲಿ ಕಾಣಿಸುತ್ತಾರೆ.

ಶುಕ್ರವಾರ ನಡೆದ ಬಣ್ಣದಾಟದಲ್ಲಿ ಬಾದಾಮಿ ಪಟ್ಟಣದಲ್ಲಿ ಮಹಿಳೆಯರು ಅತ್ಯಂತ ಸಂಭ್ರಮದಿAದ ಪಾಲ್ಗೊಂಡಿದ್ದರು. ಹಲಿಗೆ ಬಾರಿಸುತ್ತ, ನೃತ್ಯ ಮಾಡುತ್ತಿದ್ದ ಮಹಿಳೆಯರು ಬಾದಾಮಿಗೆ ಬಂದಿದ್ದ ವಿದೇಶಿ ಪ್ರಜೆಗಳಿಗೆ ನಮ್ಮ ಹೋಳಿ ಬಣ್ಣವನ್ನು ಹಚ್ಚಿ ಅವರೊಂದಿಗೆ ಸಂಭ್ರಮಿಸಿದರು.

ಬೇರೆ ಬೇರೆ ದೇಶಗಳ ಪ್ರಜೆಗಳು ಸಹ ಅಷ್ಟೆ ಉತ್ಸಾಹದಿಂದ ಬಣ್ಣವನ್ನು ಹಚ್ಚಿಕೊಂಡು ಹೆಜ್ಜೆಹಾಕಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಐತಿಹಾಸಿಕ ಬಾದಾಮಿಗೆ ಅನೇಕ ವಿದೇಶಿ ಪ್ರಜೆಗಳು ಬರುತ್ತಾರೆ. ಇದೀಗ ಹೋಳಿ ಹಬ್ಬ ಆಗಿದ್ದರಿಂದ ಅವರು ತಂಗಿದ್ದ ಖಾಸಗಿ ರೆಸ್ಟೋರೆಂಟ್ ಗಳಿಗೆ ಹೋಗಿ ಅವರಿಗೆ ನಮ್ಮ ಹೋಳಿ ಹಬ್ಬದ ಬಗ್ಗೆ ತಿಳಿಸಿದ ಬಾದಾಮಿಯ ಯುವತಿಯರ ತಂಡವೂ ಅವರನ್ನು ಹೋಳಿ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net