ವಿದೇಶಕ್ಕೆ ಸಾಗಿಸುತ್ತಿದ್ದ  460 ಚೀಲ ಪಡಿತರ ಅಕ್ಕಿ ವಶ

IMG-20230620-WA0042
Published on



ವಿಜಯವಾಣಿ ಸುದ್ದಿಜಾಲ ಕಲಬುರಗಿ
ಅನ್ಯಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ವಿತರಿಸಬೇಕಾಗಿದ್ದ ಅಕ್ಕಿಯನ್ನು ಅಕ್ರಮವಾಗಿ ಕಾಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ೪೬೦ ಚೀಲ ಅಕ್ಕಿಯನ್ನು  ನಗರದ ಚೌಕ್ ಪೊಲೀಸರು ಮಂಗಳವಾರ ವಶಪಡಿಸಿಕೊಂಡಿದ್ದಾರೆ.
ನೆಹರು ಗಂಜ್ ಪ್ರದೇಶದಲ್ಲಿರುವ  ಸೇವಾಲಾಲ್  ಗುಡಿಯ ಹತ್ತಿರದಲ್ಲಿ ಕಂಟೆನರ್‌ನಲ್ಲಿ ಅಕ್ಕಿ ಬ್ಯಾಗ್‌ಗಳನ್ನು ಸಾಗಿಸಲಾಗುತ್ತಿದೆ  ಎಂಬ ಮಾಹಿತಿಯಂತೆ ದಾಳಿ ನಡೆಸಲಾಗಿದೆ. ಪೊಲೀಸರು ವಶಪಡಿಸಿಕೊಂಡಿರುವ ಅಕ್ಕಿಯನ್ನು ವಿದೇಶ ಸಾಗಣೆ ಮಾಡಲು ಪ್ಲಾನ್ ಮಾಡಲಾಗಿತ್ತು. ಅಕ್ಕಿಯ ಚೀಲಗಳನ್ನು ಕಂಟೇನರ್‌ನಲ್ಲಿ ಕಲಬುರಗಿಯಿಂದ ಮಹಾರಾಷ್ಟç ಪನವೆಲ್ ಬಂದರಿಗೆ ಸಾಗಿಸಲಾಗುತ್ತಿತ್ತು.
ಖಚಿತ ಮಾಹಿತಿಯಂತೆ ನಗರದ ಪೊಲೀಸ್ ಆಯುಕ್ತ ಆರ್.ಚೇತನ, ಡಿಸಿಪಿ ಅಡ್ಡೂರು ಶ್ರೀನಿವಾಸುಲು, ಎಸಿಪಿ ದೀಪನ್ ಎಂ.ಎನ್. ಮಾರ್ಗದರ್ಶನದಲ್ಲಿ  ಚೌಕ್ ಠಾಣೆಯ ಇನ್‌ಸ್ಪೆಕ್ಟರ್ ರಾಜಶೇಖರ  ಹಳಿಗೋಧಿ ನೇತೃತ್ವದಲ್ಲಿ ಪಿಎಸ್‌ಐ ಹಾಗೂ ಸಿಬ್ಭಂದಿ ಕೂಡಿಕೊಂಡು ಕಾರ್ಯಾಚರಣೆ ನಡೆಸಿದ್ದಾರೆ.
ದಾಳಿಯ ಕಾಲಕ್ಕೆ ವಿವಿಧ ಕಡೆಗಳಿಂದ ಸಂಗ್ರಹಿಸಿದ್ದ ಪಡಿತರ ಅಕ್ಕಿಯನ್ನು ಹೊಸ ಬ್ಯಾಗ್‌ಗಳಲ್ಲಿ ಹಾಕಿ ಅದನ್ನು ಮುಂಬಯಿನ ಪನವೆಲ್‌ಗೆ ಸಾಗಿ ಅಲ್ಲಿನ ಬಂದರು ಮೂಲಕ ವಿದೇಶಕ್ಕೆ ಸಾಗಿಸಲು ಕಾಳದಂಧೆಕೋರರು ಉz್ದೆÃಶಿಸಿದ್ದರು. ಕಂಟೇನರ್‌ನಲ್ಲಿ ಅಕ್ಕಿ ಚೀಲಗಳನ್ನು ಸಾಗಿಸುತ್ತಿದ್ದ ಚಾಲಕ ಅಮರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.
ಅಕ್ಕಿಯನ್ನು ಯಾರು ಸಾಗಣೆ ಮಾಡುತ್ತಿದ್ದರು ಎಂಬುದರ ಕುರಿತು ತನಿಖೆ ನಡೆದಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ದಾಳಿ ನಡೆಸಿ ಅಕ್ಕಿಯನ್ನು ಪತ್ತೆ ಮಾಡಿ ಜಪ್ತಿ ಮಾಡಿರುವುದನ್ನು   ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ. ಈ ಕುರಿತು ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net