ವಿಟಿಯು ಪ್ರಾದೇಶಿಕ ಕೇಂದ್ರಕ್ಕೆ 5ಜಿ ಲ್ಯಾಬ್

2710Klb08
Published on

ಕಲಬುರಗಿ: ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯಿಂದ ದೇಶದ ೧೦೦ ವಿದ್ಯಾಸಂಸ್ಥೆಗಳಿಗೆ ೫ಜಿ ಪ್ರಯೋಗಾಲಯಗಳನ್ನು ನೀಡಿದ್ದು, ಅದರಲ್ಲಿ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲೂ ಪ್ರಯೋಗಾಲಯ ತೆರೆಯಲು ನಿರ್ಧರಿಸಲಾಗಿದೆ.

ಶುಕ್ರವಾರ ಏರ್ಪಡಿಸಿದ್ದ ಇಂಡಿಯಾ ಮೊಬೈಲ್ ಕಾಂಗ್ರೆಸ್-೨೦೨೩ರ ಸಮಾವೇಶದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲ ಪ್ರಯೋಗಾಲಯಗಳನ್ನು ಅನಾವರಣ ಮಾಡಿದರು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಪ್ರಯೋಗಾಲಯಗಳು ದೇಶದ ಬೆಳವಣಿಗೆಗೆ ಹಾಗೂ ತಂತ್ರಜ್ಞಾನ ಜನಸಾಮಾನ್ಯರ ಜೀವನ ಸುಧಾರಣೆಗೆ ಉಪಯೋಗವಾಗುವಂತಹ ಅವಿಷ್ಕಾರ ನಡೆಸಿ, ಎಲ್ಲ ವರ್ಗದ ಜನರಿಗೆ ಉಪಯೋಗವಾಗುವಂತಹ ಕಾರ್ಯ ನಿರ್ವಹಿಸಿ ಎಂದು ಹೇಳಿದರು.

ವಿಡಿಯೋ ಕಾನ್ಫರೆನ್ಸ್: ಈ ಭಾಗದ ಹಲವು ವಿದ್ಯಾಸಂಸ್ಥೆಗಳಿಗೆ ಹಾಗೂ ತಂತ್ರಜ್ಞಾನವನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ೫ಜಿ ಪ್ರಯೋಗಾಲಯ ನೀಡಿರುವುದಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕ ಬಸವರಾಜ ಗಾದಗೆ ಖುಷಿ ವ್ಯಕ್ತಪಡಿಸಿ, ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net