

ಬಾಗಲಕೋಟೆ: ವೈಜ್ಞಾನಿಕವಾಗಿ ಹೊಸ ಹೊಸ ಸಂಶೋಧನೆಗಳನ್ನು ಮಾಡುವಾಗ ವಿಜ್ಞಾನದ ಪ್ರಗತಿ ಹೆಚ್ಚಿಸಲು ಪ್ರಬಂಧಗಳ ಗುಣಮಟ್ಟ ಹೆಚ್ಚಿಸಿ ಪ್ರಸಾರಿಸುವಲ್ಲಿ ವೈದ್ಯ ಸಮೂಹ ಶ್ರಮಿಸಬೇಕು ಎಂದು ಎಸ್.ಎನ್. ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ.ಭುವನೇಶ್ವರಿ ಯಳಮಲಿ ಅಭಿಪ್ರಾಯಪಟ್ಟರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ಮೆಡಿಕಲ್ ಕಾಲೇಜಿನ ಹಾನಗಲ್ಲ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗ ಹಾಗೂ ಮೆಡಿಕಲ್ ಎಜುಕೇಶನ್ ವಿಭಾಗಗಳ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಆರ್ಟ್ ಆ್ಯಂಡ್ ಸೈನ್ಸ್ ಆಫ್ ರೈಟಿಂಗ್ ರೀಸರ್ಚ್ ಪೇಪರ್ ಎಂಬ ವಿಷಯದ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೆಹಲಿಯ ಮೌಲಾನಾ ಆಝಾದ್ ಮೆಡಿಕಲ್ ಕಾಲೇಜಿನ ಚಿಕ್ಕಮಕ್ಕಳ ವಿಭಾಗದ ಪ್ರೊ. ಡಾ.ಸಿದ್ಧಾರ್ಥ ರಾಮಜಿ, ದೆಹಲಿ ಯುನಿವರಸಿಟಿ ಆಫ್ ಮೆಡಿಕಲ್ ಸೈನ್ಸ್ ನ ಪ್ರೊ.ಡಾ.ಪಿಯುಶ್ ಗುಪ್ತಾ ಮತ್ತು ನಿರ್ದೇಶಕ ಡಾ. ಎಸ್.ವಿ ಮಧು ಸಂಶೋಧನೆಗಳು ವೈಜ್ಞಾನಿಕತೆ, ಸಮುದಾಯದ ಉಪಯೋಗಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಾಗಾರದಲ್ಲಿ ನಗರದ ಪ್ರಮುಖ ಆಸ್ಪತ್ರೆಯ ವೈದ್ಯರು, ಮೆಡಿಕಲ್ ಕಾಲೇಜು, ದಂತ ಕಾಲೇಜು, ಫಿಜಿಯೋಥೆರಪಿ ಕಾಲೇಜು ಮತ್ತು ನರ್ಸಿಂಗ್ ಕಾಲೇಜಿನ ವೈದ್ಯ ಪ್ರಮುಖರೊಂದಿಗೆ ಚಿಕ್ಕಮಕ್ಕಳ ವಿಭಾಗದ ತಜ್ಞ ವೈದ್ಯರು ಭಾಗವಹಿಸಿದ್ದರು. ವೈದ್ಯಕೀಯ ಅಽÃಕ್ಷಕ ಡಾ.ಶ್ರೀರಾಮ ಕೋರಾ, ಡಾ. ರಮೇಶ್ ಪೋಳ, ಡಾ.ಸಂಜೀವ ಕೊಳಗಿ ಉಪಸ್ಥಿತರಿದ್ದರು. ಡಾ.ಅಶೋಕ ಬಡಕಲಿ ಸ್ವಾಗತಿಸಿದರು. ಡಾ.ನಿರಂಜನ ಕೋರಿ ನಿರೂಪಿಸಿದರು. ಡಾ. ರಮೇಶ್ ಪೋಳ ವಂದಿಸಿದರು.