ವಿಜೃಂಭಣೆಯ ಹೆಡತಲೆ ಭಂಗಿ ಮಾರಮ್ಮ ರಥೋತ್ಸವ

21 njd news 06
Published on

ನಂಜನಗೂಡು: ತಾಲೂಕಿನ ಹೆಡತಲೆ ಗ್ರಾಮ ದೇವತೆ ಶ್ರೀ ಆದಿಶಕ್ತಿ ಭಂಗಿ ಮಾರಮ್ಮ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನೆರವೇರಿತು.

ಭಂಗಿ ಮಾರಮ್ಮನ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತಲೂ ಪ್ರದಕ್ಷಣೆ ಮಾಡಿ, ವಿವಿಧ ಬಗೆಯ ಹೂ ಮತ್ತು ಹಾರಗಳಿಂದ ಅಲಂಕರಿಸಿದ್ದ ರಥದಲ್ಲಿ ಕೂರಿಸಲಾಯಿತು. ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ರಥದ ಬೀದಿಗಳಲ್ಲಿ ಸಂಚರಿಸಿದ ರಥಕ್ಕೆ ಹಣ್ಣು-ಜವನ ಎಸೆದರು. ಮಾಜಿ ಶಾಸಕ ಬಿ.ಹರ್ಷವರ್ಧನ್ ಭಾಗವಹಿಸಿದ್ದರು. ಬಸವಟ್ಟಿಗೆ, ಮಾಡ್ರಳ್ಳಿ, ಸಿಂಗಾರಿಪುರ, ಗೋಣತಗಾಲ, ಹೆಮ್ಮರಗಾಲ, ಮಲ್ಲಹಳ್ಳಿ, ಕುಂಬರಹಳ್ಳಿ ಗ್ರಾಮಗಳಿಂದ ಜನರು ಆಗಮಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net