ವಿಜೃಂಭಣೆಯ ಶ್ರೀವೇಣುಗೋಪಾಲಸ್ವಾಮಿ ರಥೋತ್ಸವ

13-02-25--krs1 (2)
Published on

ಕೆ.ಆರ್.ಸಾಗರ: 38 ವರ್ಷಗಳ ನಂತರ ನಾರ್ತ್ ಬ್ಯಾಂಕ್ ಗ್ರಾಮದಲ್ಲಿರುವ ಶ್ರೀಕಣ್ಣೇಶ್ವರ ಮತ್ತು ಶ್ರೀವೇಣುಗೋಪಾಲಸ್ವಾಮಿ ರಥೋತ್ಸವ ದಾನಿಯೊಬ್ಬರು ಲಕ್ಷಾಂತರ ರೂ.ವೆಚ್ಚದಲ್ಲಿ ನಿರ್ಮಿಸಿದ ರಥದಲ್ಲಿ ವಿಜೃಂಭಣೆಯಿಂದ ಜರುಗಿತು.

ಬುಧವಾರ ಬೆಳಗ್ಗೆ 8 ರಿಂದ 9 ಗಂಟೆಯ ಲಗ್ನದಲ್ಲಿ ಮೈಸೂರಿನ ಚಾಮುಂಡಿಬೆಟ್ಟದ ಶ್ರೀಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಡಾ.ಶಶಿಧರ ದೀಕ್ಷಿತ್ ನೇತೃತ್ವದಲ್ಲಿ ನೂತನ ಅಲಂಕೃತ ರಥಕ್ಕೆ ಪೂಜೆ ಸಲ್ಲಿಸಿ ಶ್ರೀಕಣ್ವೇಶ್ವರ ದೇವರ ರಥೋತ್ಸವ ನಡೆಯಿತು. ಗುರುವಾರ ಬೆಳಗ್ಗೆ 8ರಿಂದ 8.30 ಶುಭಲಗ್ನ ಶ್ರೀವೇಣುಗೋಪಾಲಸ್ವಾಮಿ ದೇವರ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಅರ್ಚಕ ಶಿವು ಮತ್ತು ಸುಬ್ಬಣ್ಣ ನೇತೃತ್ವದಲ್ಲಿ ಶ್ರೀಕಣ್ಣೇಶ್ವರ ಮತ್ತು ಶ್ರೀವೇಣುಗೋಪಾಲಸ್ವಾಮಿ ದೇವರ ಮೂರ್ತಿಗಳಿಗೆ ವಿಶೇಷವಾಗಿ ವಿವಿಧ ಅಭಿಷೇಕ, ಪೂಜೆಗಳು ನಡೆದು ವಿವಿಧ ಹೂಗಳಿಂದ ಅಲಂಕರಿಸಲಾಗಿತ್ತು.

ಕೆ.ಆರ್.ಸಾಗರ ಅಣೆಕಟ್ಟೆ ನಿರ್ಮಾಣದ ಸಂದರ್ಭದಲ್ಲಿ ಶ್ರೀಕಣ್ಣೇಶ್ವರಸ್ವಾಮಿ ಮತ್ತು ಶ್ರೀವೇಣುಗೋಪಾಲಸ್ವಾಮಿ ಮೂಲ ದೇವರು ನಾರ್ತ್ ಬ್ಯಾಂಕ್ ಗ್ರಾಮದಲ್ಲಿ ಸ್ಥಳಾಂತರಗೊಂಡ ನೂರು ವರ್ಷಗಳ ಹಿಂದೆ ಇಲ್ಲಿನ ದೇವಾಲಯ ನಿರ್ಮಿಸಿ ಪ್ರತಿಷ್ಠಾಪನೆಗೊಂಡಿದೆ. ಪ್ರತಿ ನಿತ್ಯ ಪೂಜಾ ಕೈಂಕರ್ಯಗಳು ನಡೆದುಕೊಂಡು ಬಂದಿದ್ದು, ಪ್ರತಿ ವರ್ಷ ಮಾಘ ಪೂರ್ಣಿಮೆಯಂದು ವಿಶೇಷ ಪೂಜೆಗಳು, ಉತ್ಸವ ನಡೆಯುತ್ತಿದೆ.

ಪ್ರತಿ ವರ್ಷಶುದ್ಧ ಮಾಘ ಪೂರ್ಣಿಮೆಯಂದ ಶ್ರೀಕಣ್ಣೇಶ್ವರ ದೇವರ ಪೂಜೆ ಮಾರನೇ ದಿನದಂದು ಶ್ರೀವೇಣುಗೋಪಾಲಸ್ವಾಮಿ ದೇವರ ಉತ್ಸವ ನಡೆದುಕೊಂಡು ಬರುತ್ತಿದ್ದು, ಈ ದೇವರುಗಳು ಕೆ.ಆರ್.ಸಾಗರ ಹಿನ್ನೀರಿನಲ್ಲಿ ಮುಳಗಡೆಯಾಗಿದ್ದ ದೇವಾಲಯದ ಮೂಲ ವಿಗ್ರಹಗಳಾಗಿವೆ. 38 ವರ್ಷಗಳ ಹಿಂದ ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ರಥೋತ್ಸವ ನಡೆದಿರಲಿಲ್ಲ, ಈ ಭಾರಿ ಭಕ್ತರೊಬ್ಬರು ಉತ್ತಮ ಮರಗಳಿಂದ ಸುಂದರವಾಗಿ 15 ಅಡಿ ಎತ್ತರದ ರಥ ನಿರ್ಮಿಸಿಕೊಟ್ಟಿದ್ದಾರೆ, ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ನಡೆದಿದೆ ಎಂದರು. ಈ ರಥೋತ್ಸವದಲ್ಲಿ ನಾರ್ತ್‌ಬ್ಯಾಂಕ್, ಚಿಕ್ಕಾಯರಹಳ್ಳಿ, ಹೊಸ ಕನ್ನಂಬಾಡಿ ಸೇರಿದಂತೆ ಹಲವಾರು ಮುಳುಗಡೆ ಗ್ರಾಮಗಳ ಕುಟುಂಬದವರು, ನೂರಾರು ಭಕ್ತರು ಭಾಗವಹಿಸಿದ್ದರು.

ಈ 38 ವರ್ಷಗಳ ಹಿಂದೆ ಇದ್ದ ರಥ ಶಿಥಿಲಗೊಂಡ ಹಿನ್ನೆಲೆಯಲ್ಲಿ ಅಂದಿನಿಂದ ರಥೋತ್ಸವ ನಡೆಯುತ್ತಿರಲಿಲ್ಲ. ಈ ಗ್ರಾಮದಲ್ಲಿ ನೆಲೆಸಿದ್ದ ಸತ್ಯಂ ಕುಟುಂಬದವರು ಸುಮಾರು 15 ಅಡಿ ಎತ್ತರದ ರಥವನ್ನು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಸುಂದರವಾಗಿ ನಿರ್ಮಿಸಿಕೊಟ್ಟಿದ್ದು ಭಕ್ತರಲ್ಲಿ ಸಂತಸ ತಂದಿದೆ. ಡಾ ಶಶಿಧರ ದೀಕ್ಷಿತ್, ಮೈಸೂರಿನ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಅರ್ಚಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net