ವಿಜಯ ನಿರಾಣಿಗೆ ಅಯೋಧ್ಯೆಗೆ ಆಮಂತ್ರಣ

bkt-19-6
ವಿಜಯ ನಿರಾಣಿ
Published on

ಬಾಗಲಕೋಟೆ : ಜಿಲ್ಲೆಯ ಎಂಆರ್‌ಎನ್ ನಿರಾಣಿ ಉದ್ಯಮ ಸಮೂಹದ ವ್ಯವಸ್ಥಾಪಕ ನಿರ್ದೇಶಕ, ಯುವ ಉದ್ಯಮಿ ವಿಜಯ ನಿರಾಣಿ ಅವರಿಗೆ ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮನ ಮೂತಿ ಪ್ರತಿಷ್ಠಾಪನೆಯ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ಬಂದಿದೆ.

ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣ ಟ್ರಸ್ಟನಿಂದ ಅಧಿಕೃತ ಆಹ್ವಾನ ಬಂದಿದ್ದು, ಜ. ೨೨ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ದೇಶದ ಯುವ ಉದ್ಯಮಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ವಿಜಯಕುಮಾರ ನಿರಾಣಿ ಅವರಿಗೆ ವಿಶ್ವ ಹಿಂದೂ ಪರಿಷತ್‌ನ ಪ್ರಮುಖರು, ಅಯೋಧ್ಯೆಯಿಂದ ಬಂದಿರುವ ಅಧಿಕೃತ ಆಹ್ವಾನವನ್ನು ತಲುಪಿಸಿದರು. ಯುವ ಉದ್ಯಮಿಗಳ ಪಟ್ಟಿಯಲ್ಲಿ ಕರ್ನಾಟಕದಿಂದ ವಿಜಯ ನಿರಾಣಿ ಅವರಿಗೆ ಈ ಅಧಿಕೃತ ಆಹ್ವಾನ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net