

ವಿಜಯವಾಣಿ ಸುದ್ದಿಜಾಲ ಕಾರವಾರ
ಭಾರತೀಯ ನೌಕಾ ದಿನಾಚರಣೆಯ ಅಂಗವಾಗಿ ತಾಲೂಕಿನ ಅರಗಾ ನೌಕಾನೆಲೆಯಲ್ಲಿರು ಐಎನ್‌ಎಸ್ ವಿಕ್ರಮಾದಿತ್ಯ ನೌಕೆ ವೀಕ್ಷಣೆಗೆ ಶಾಲೆ, ಕಾಲೇಜ್ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಕಾರವಾರ 15 ಶಾಲೆ, ಕಾಲೇಜ್‌ಗಳ 1 ಸಾವಿರ ವಿದ್ಯಾರ್ಥಿಗಳು ಸೋಮವಾರ ಸೇನೆಯ ಬೃಹತ್ ನೌಕೆಯನ್ನು ನೋಡಿ ಅಚ್ಚರಿಪಟ್ಟರು.
ಯುದ್ಧ ನೌಕಾ ಹಡಗು ರಿಪೇರಿ ಪ್ರಾಂಗಣ ಹಾಗೂ ನೌಕೆಯನ್ನು ತೋರಿಸಲಾಯಿತು. ನೌಕೆಯ ಉಪಕರಣಗಳ ಬಗ್ಗೆ ನೌಕಾ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಭಾರತೀಯ ನೌಕಾಸೇನೆಯನ್ನು ಸೇರುವ ಕುರಿತು ಪ್ರೇರೇಪಣೆ ನೀಡಲಾಯಿತು.