

ಬಾಗಲಕೋಟೆ: ವಿಕಸಿತ ಭಾರತದ ಕನಸನ್ನು ನನಸಾಗಿಸುವಲ್ಲಿ ಈ ಬಜೆಟ್ ಅಡಿಪಾಯವಾಗಲಿದ್ದು, ವಿಕಸಿತ ಭಾರತದ ದಿಕ್ಸೂಚಿಯಾಗಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಹಿಂಜರಿಕೆಯ ನಡುವೆಯೂ, ಭಾರತದ ಆರ್ಥಿಕ ಬೆಳವಣಿಗೆಯ ಉಜ್ವಲವಾಗಿದ್ದು, ಏರುಗತಿಯಲ್ಲಿ ಮುಂದುವರಿಯುತ್ತಿದೆ, ದೇಶದ ಅರ್ಥ ವ್ಯವಸ್ಥೆಯ ಶರವೇಗ ನಿಡುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 7ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದಿದ್ದು, ಪ್ರಧಾನಿ ನರೆಂದ್ರ ಮೋದಿಜಿ ಅವರ ನೇತೃತ್ವದ 3.0 ವಿಕಸಿತ ಭಾರತ ಬಜೆಟ್ 2024-25 ರಲ್ಲಿ ಅನ್ನದಾತ, ಬಡವ ಹಾಗು ಮಹಿಳೆ ಸೇರಿದಂತೆ ಕೃಷಿಗೆ ಆದ್ಯತೆ, ಸಮಾಜಿಕ ನ್ಯಾಯ, ಉದ್ಯೋಗ, ಉತ್ಪಾದನೆ ಹಾಗೂ ಸೇವಾ ಕ್ಷೇತ್ರ, ನಗರಾಭಿವೃದ್ಧಿ, ಮಹಿಳೆ ಯುವಕರು ರೈತ ಸಮುದಾಯ, ಶಕ್ತಿಮೂಲಗಳು, ಸಂಶೋಧನೆ, ಭವಿಷ್ಯದ ಸುಧಾರಣೆಗಳು ಸೇರಿದಂತೆ ಈ 9 ಕ್ಷೇತ್ರಗಳಿಗೆ ಪ್ರಮುಖವಾಗಿ ಆಧ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.