

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಯ ಮೊದಲ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 7ನೇ ಬಾರಿ ಮಂಡಿಸಿದ ಬಜೇಟ್ ಭವಿಷ್ಯದ ಭಾರತಕ್ಕೆ ಹೊಸ ಚೈತನ್ಯ ತುಂಬುವ ಜೊತೆಗೆ ಭಾರತವನ್ನು ವಿಶ್ವದ ಅಗ್ರ ವಿತ್ತ ಶಕ್ತಿಯಾಗಿ ರೂಪಗೊಳಿಸುವಲ್ಲಿ ಮಹತ್ವಾಕಾಂಕ್ಷೆಯ ಬಲ ತುಂಬಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮುರುಗೇಶ ನಿರಾಣಿ ಬಣ್ಣಿಸಿದ್ದಾರೆ.
2047ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಈ ಬಜೇಟ್ ಅಡಿಪಾಯ ಹಾಕಲಿದ್ದು, ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ ನೀಡಲಾಗಿದೆ. ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ನೀಡುವ ಜೊತೆಗೆ 1.52 ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲಿಟ್ಟಿದ್ದು ಅಭಿನಂದನೀಯವಾಗಿದೆ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲಿಟ್ಟದ್ದು ಈ ಬಜೇಟ್ ದೇಶದ ಆರ್ಥಿಕ ಹಿತದೃಷ್ಟಿಯಿಂದ ಫಲಪ್ರದ ಆಂಶಗಳನ್ನು ಹೊಂದಿದೆ ಎಂದು ಅವರು ಹೇಳಿದರು.