ವಾಹನದಲ್ಲೇ ಹೆರಿಗೆ

21 joida 01
Published on

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯರಮುಖದ ಗರ್ಭಿಣಿಯನ್ನು ಕಾರವಾರದ ಆಸ್ಪತ್ರೆಗೆ ಸಾಗಿಸುವ ವೇಳೆ ಆಂಬುಲೆನ್ಸ್ ವಾಹನದಲ್ಲಿಯೇ ಹೆರಿಗೆಯಾಗಿದೆ.

ಗುರುವಾರ ಜೊಯಿಡಾ ತಾಲೂಕು ಆಸ್ಪತ್ರೆಗೆ ದಾಖಲಾದ ದೇವಕಿ ವಾಲೇಕರ ಎಂಬ ಗರ್ಭಿಣಿಯನ್ನು ಕಾರವಾರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ರಾತ್ರಿ 11 ಗಂಟೆಯ ವೇಳೆಗೆ ಅಣಶಿ ಘಟ್ಟ ಮಧ್ಯೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಎಂಟಿ ದೇವಲ ನಾಯ್ಕ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ಜನನವಾದ ಹೆಣ್ಣು ಮಗು ಆರೋಗ್ಯದಿಂದಿದ್ದು, ವಾಹನ ಚಾಲಕ ವಿನಾಯಕ ಎಸ್. ಮತ್ತು ದೇವಲಾ ನಾಯ್ಕ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net