ವಾಹನಗಳ ಓಡಾಟಕ್ಕೆ ನಿರ್ಬಂಧ

27 hkr-1
Published on

ಹಿರೇಕೆರೂರ: ಲಾಕ್​ಡೌನ್ ಹಿನ್ನಲೆಯಲ್ಲಿ ಶುಕ್ರವಾರ ಪಟ್ಟಣದ ವಿವಿಧ ಕಾಲನಿಗಳು ಸೇರಿ ಕೆಲವು ಹಳ್ಳಿಗಳಲ್ಲಿ ರಸ್ತೆಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ.

ಪಟ್ಟಣದ ಜಾವಿದ್ ನಗರ, ಸಿಂಪಿಗಲ್ಲಿ, ನಾಮದೇವ ಗಲ್ಲಿ, ಕಾಳಿದಾಸ ನಗರ, ಆಜಾದ ನಗರ, ಜನತಾ ಪ್ಲಾಟ್ ಸೇರಿ ತಾಲೂಕಿನ ಹಾದ್ರಿಹಳ್ಳಿ, ಕಾಲ್ವಿಹಳ್ಳಿ, ಇಂಗಳಗೊಂದಿ, ಮಡ್ಲೂರು ಮತ್ತಿತರ ಗ್ರಾಮಗಳ ರಸ್ತೆಗಳನ್ನು ಗ್ರಾಮಸ್ಥರೇ ಬಂದ್ ಮಾಡಿದ್ದಾರೆ. ಪಟ್ಟಣ ಸೇರಿ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಸರಬರಾಜು ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದು, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಅಬಕಾರಿ ಇಲಾಖೆಗೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ರಿಯಾಜುದ್ದಿನ್ ಭಾಗವಾನ್ ಪತ್ರಿಕೆಗೆ ತಿಳಿಸಿದರು.

ಪಟ್ಟಣದಲ್ಲಿ ಕಿರಾಣಿ ಅಂಗಡಿಗಳು ತೆರೆದಿದ್ದು, ಪಟ್ಟಣ ಪಂಚಾಯಿತಿಯವರು ಗುರುತಿಸಿದ ರೇಖೆಯ ಒಳಗೆ ನಿಂತು ಖರೀದಿಸುತ್ತಿರುವುದು ಕಂಡು ಬಂದಿತು. ಸಿಪಿಐ ಮಂಜುನಾಥ ಪಂಡಿತ, ಪಪಂ ಮುಖ್ಯಾಧಿಕಾರಿ ರಾಜಾರಾಮ್ ಪವಾರ, ಪಿಎಸ್​ಐ ದೀಪು ಎಂ.ಪಿ., ಅವರು ವಿನಾಕಾರಣ ಸಂಚರಿಸುವ ಸಾರ್ವಜನಿಕರನ್ನು ತಡೆದು ವಿಚಾರಣೆ ನಡೆಸಿ ಬುದ್ಧಿ ಹೇಳಿ ಮನೆಗೆ ಕಳುಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net