

ಬಾಗಲಕೋಟೆ: ಅಽಕಾರಕ್ಕಿಂತ ಧರ್ಮದ ಮೌಲ್ಯಗಳು ಮುಖ್ಯ ಎಂದು ಸಾರಿದ ಮಹರ್ಷಿ ವಾಲ್ಮೀಕಿಯ ರಾಮರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನನಸು ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಶಿವಾನಂದ ಜೀನನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಬಾಗಲಕೋಟೆ ಕ್ಷೇತ್ರದ ಬಿಜೆಪಿ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಅವರ ಜಯಂತಿ ದಿನಾಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿ ಮಾತನಾಡಿದರು.
ಪ್ರತಿಯೊಬ್ಬರು ಅಽಕಾರವನ್ನು ಧರ್ಮದ ಹಾದಿಯಲ್ಲಿ ಪಡೆಯಬೇಕು. ನ್ಯಾಯ ನಿಷ್ಠೆ, ಪ್ರಾಮಾಣಿಕತೆಯಿಂದ ಅಽಕಾರ ನಡೆಸಬೇಕೆಂಬ ಮಹರ್ಷಿ ವಾಲ್ಮೀಕಿ ಬಯಸಿದ ರಾಮರಾಜ್ಯವನ್ನು ಪ್ರಧಾನಿ ಮೋದಿ ಕಟ್ಟುತ್ತಿದ್ದಾರೆ. ಪ್ರತಿಯೊಬ್ಬ ಪ್ರಜೆಯ ಸಮಸ್ಯೆಗಳ ಪರಿಹಾರವನ್ನು ರಾಮಾಯಣದಲ್ಲಿ ನಿತ್ಯ ನೂತನವಾಗಿ ಕಾಣಬಹುದು. ಕಲೆ,ಸಾಹಿತ್ಯ, ಸಂಗೀತ, ಶಾಸ್ತçಗಳ ಬಳಕೆ, ವೈಜ್ಞಾನಿಕ ಬಳಕೆಯ ವಿನೂತನ ವಿದ್ಯಾಭ್ಯಾಸ ಕ್ರಮ, ಪರಿಸರ, ಸಾಮಾಜಿಕ ನ್ಯಾಯ, ಅರ್ಥ ನೀತಿ, ನ್ಯಾಯ ನೀತಿ, ಮನುಷ್ಯ ಸಂಬAಧಗಳು ಮುಂತಾದ ಎಲ್ಲ ವಿಚಾರಗಳನ್ನು ಸಾರ್ವಕಾಲಿಕ ಸತ್ಯವಾಗಿ ರಚಿಸಲಾಗಿದೆ ಎಂದರು.
ಡಾ.ಎA.ಎಸ್.ದಡ್ಡೆನ್ನವರ, ಅಯ್ಯಪ್ಪ ವಾಲ್ಮೀಕಿ, ರಾಜು ಮುದೇನೂರ, ಬಸವರಾಜ ಯಂಕAಚಿ, ಸರಸ್ವತಿ ಕುರಬರ, ಶಶಿಕಲಾ ಮಜ್ಜಗಿ, ಶಾಂತಾ ಹನಮಕ್ಕನವರ, ಪ್ರೇಮಾ ಅಂಬಿಗೇರ, ಚೆನ್ನಯ್ಯ ಹಿರೇಮಠ, ಮಹಾಂತೇಶ ಹಿರೇಮಠ, ಕುಮಾರ ಯಳ್ಳಿಗುತ್ತಿ, ಗುಂಡುರಾವ ಶಿಂಧೆ, ಶಿವಾನಂದ ಟವಳಿ, ಯಲ್ಲಪ್ಪ ನಾರಾಯಣಿ ಮತ್ತಿತರರು ಇದ್ದರು.