

ಕಲಬುರಗಿ: ರಾಮಾಯಣದ ಇತಿಹಾಸಕ್ಕೆ ಶಕ್ತಿ ನೀಡಿದವರು ಮಹರ್ಷಿ ವಾಲ್ಮೀಕಿ. ವಾಲ್ಮೀಕಿಯ ಸ್ಪರ್ಷವಿಲ್ಲದೆ ರಾಮಾಯಣ ಇಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯವಿರಲಿಲ್ಲ. ಅವರ ಹೆಸರು, ಸ್ಫೂರ್ತಿ ನಿರಂತರವಾಗಿಡಲು ಎಲ್ಲ ಸಹಕಾರ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ನಗರದ ಡಾ.ಎಸ್.ಎಂ.ಪAಡಿತ್ ರಂಗಮAದಿರದಲ್ಲಿ ಗುರುವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದಲ್ಲಿ ಮಾತನಾಡಿ, ನಗರದ ಮುಖ್ಯರಸ್ತೆಯೊಂದಕ್ಕೆ ವಾಲ್ಮೀಕಿ ನಾಮಕರಣ ಮಾಡಬೇಕು, ಗುಲ್ಬರ್ಗ ವಿವಿಯಲ್ಲಿನ ಅಧ್ಯಯನ ಪೀಠಕ್ಕೆ ಸರ್ಕಾರದಿಂದ ೫೦ ಲಕ್ಷ ರೂ. ಅನುದಾನ ಕೊಡಿಸಲು ಪ್ರಯತ್ನಿಸುತ್ತೇನೆ. ವಾಲ್ಮೀಕಿ ಭವನಕ್ಕೆ ಕೂಡಾದಿಂದ ನಿವೇಶನ ಪಡೆದರೆ ಸಹಕಾರ ನೀಡಲಾಗುವುದು ಎಂದು ಹೇಳಿದರು.
ಪಾಲಿಕೆ ಮಹಾಪೌರ ಯಲ್ಲಪ್ಪ ನಾಯ್ಕೋಡಿ ಮಾತನಾಡಿ, ತ್ರೇತಾಯುಗದಲ್ಲಿ ವಾಲ್ಮೀಕಿ ರಚಿಸಿದ ರಾಮಾಯಣದ ನಂತರ ಮುನ್ನೂರಕ್ಕೆ ಹೆಚ್ಚು ರಾಮಾಯಣ ಬಂದರೂ ಮೂಲವನ್ನು ಬದಲಾಯಿಸಲು ಸಾಧ್ಯವಿಲ್ಲ. ಇಡೀ ರಾಮಾಯಣ ಕಾವ್ಯ ಅಧ್ಯಯನ ಮಾಡಿದರೆ ವಾಲ್ಮೀಕಿ ವಿಜ್ಞಾನಿ, ಆರ್ಥಿಕ ತಜ್ಞ, ಸೈನ್ಯ, ರಾಜಾಡಳಿತ ತಜ್ಞನಾಗಿದ್ದು ತಿಳಿಯುತ್ತದೆ. ವಾಲ್ಮೀಕಿ ಒಂದು ಸಮುದಾಯಕ್ಕೆ ಸೀಮಿತ ಆಗಬಾರದು ಎಂದರು.
ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ.ಕಿರಣ ಗಾಜನೂರ ವಿಶೇಷ ಉಪನ್ಯಾಸ ನೀಡಿದರು. ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಕಲ್ಯಾಣ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿ ಪಾಟೀಲ್ ಮಾತನಾಡಿದರು. ಜಿಲ್ಲಾ ಸಮಾಜ ಕಲ್ಯಾಣ ಅಪರ ನಿರ್ದೇಶಕ ಎಂ.ಎಸ್.ಅಲ್ಲಾಬಕ್ಷಾ ಸ್ವಾಗತಿಸಿದರು. ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತ ಸಾಹಿತ್ಯ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಗದೇವಪ್ಪ, ಜಿಲ್ಲಾ ವಾಲ್ಮೀಕಿ ನಾಯಕ ಸಂಘದ ಗೌರವಾಧ್ಯಕ್ಷ ಗುರುರಾಜ ಎಂ. ನರಿಬೋಳಿ, ಸಿಂಧೂರ ಲಕ್ಷö್ಮಣ ವಂಶಸ್ಥ ಲಕ್ಷö್ಮಣ ನಾಯಕ ಇತರರಿದ್ದರು.