

ಬಾಗಲಕೋಟೆ: ರಾಮಾಯಣದ ಮೂಲಕ ಮಮತೆ, ಭ್ರಾತೃತ್ವ, ತ್ಯಾಗ, ದೇಶಪ್ರೇಮ, ಅಳಿಲು ಸೇವೆ, ಪಿತೃವಾಕ್ಯ ಪರಿಪಾಲನೆ ಮುಂತಾದ ಹಲವಾರು ಮಾನವೀಯ ಮತ್ತು ಸಾಮಾಜಿಕ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಆದಿಕವಿ ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳು ಸರ್ವಕಾಲಿಕವಾಗಿವೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಬಾದಾಮಿ ನಗರದ ಪಿಕಾರ್ಡ ಬ್ಯಾಂಕ್ ಆವರಣದಲ್ಲಿ ಮಂಗಳವಾರ ತಾಲೂಕಾಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ-೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಮಾಯಣ ಬರೆದ ವಾಲ್ಮೀಕಿ ಮಹರ್ಷಿ ಅವರನ್ನು ಶ್ರೇಷ್ಠ ಕವಿ. ರಾಮಾಯಣವನ್ನು ಸಂಸ್ಕೃತ ಭಾಷೆಯಲ್ಲಿ ಬರೆದರು. ಅಂದು ವಾಲ್ಮೀಕಿ ವಿದ್ಯಾಭ್ಯಾಸ ಕಲಿಯುವದು ತುಂಬಾ ದುಸ್ತರವಾಗಿತ್ತು. ವಿಚಾರಧಾರೆಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನನ್ನ ಅಽಕಾರಾವಽಯಲ್ಲಿ ಎಲ್ಲ ಸಮಾಜದವರಿಗೆ ನನ್ನ ಕೈಲಾದಷ್ಟು ಸಹಾಯ ಮತ್ತು ಸರಕಾರದ ಯೋಜನೆಗಳನ್ನು ತಲುಪಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಕುವೆಂಪು ವಿವಿ ಉಪನ್ಯಾಸಕ ಮಂಜುನಾಥ ನಾಯ್ಕರ ಉಪನ್ಯಾಸ ನೀಡಿ, ಮೌಲ್ಯಗಳು ರಾಮಾಯಣದಿಂದ ತಿಳಿದು ಬರುತ್ತವೆ. ಒಬ್ಬ ಶ್ರೇಷ್ಠ ಚಿಂತಕ, ಮೌಲ್ಯಗಳು ಇದ್ದಾಗ ಬದುಕು ಸುಂದರವಾಗಲು ಸಾಧ್ಯ. ಸಹೋದರತ್ವ, ಸಹೋದರತೆ ಇರಬೇಕು. ಜೀವನಕ್ಕೆ ಮೌಲ್ಯಗಳನ್ನು ಕಲಿಸುತ್ತದೆ. ವಾಲ್ಮೀಕಿ ಸಮುದಾಯ ಬಾಂಧವರು ಉತ್ತಮ ಶಿಕ್ಷಣ ಪಡೆದು ಶ್ರಮದಿಂದ ಮುಂದೆ ಬರಬೇಕು. ಶಿಕ್ಷಣಕ್ಕೆ ಮಹತ್ವ ಕೊಡಬೇಕು. ಶಿಕ್ಷಣದಿಂದ ಬದಲಾವಣೆ ಸಾಧ್ಯ. ಎಲ್ಲರಿಗೂ ಕಾಯುವ ತಾಳ್ಮೆ ಇರಬೇಕು ಎಂದರು.
ನಾಯಕ ಸಮಾಜದ ತಾಲೂಕಾಧ್ಯಕ್ಷ ಪ್ರಕಾಶ ನಾಯ್ಕರ ಮಾತನಾಡಿದರು. ಪುರಸಭೆ ಅಧ್ಯಕ್ಷ ಪಾಂಡಪ್ಪ ಕಟ್ಟಿಮನಿ, ನಗರ ಯೋಜನಾ ಪ್ರಾಽಕಾರದ ಅಧ್ಯಕ್ಷ ಶಿವುಕುಮಾರ ಹಿರೇಮಠ, ಪುರಸಭೆ ಸದಸ್ಯರಾದ ಗೌರಮ್ಮ ಬೇಲೂರಪ್ಪನ್ನವರ, ಮಹಾಂತೇಶ ತಳವಾರ, ಮುಖಂಡರಾದ ಲಕ್ಷ÷್ಮಣ ಮರಡಿತೋಟದ, ಪರಸಪ್ಪ ನಾಯ್ಕರ, ತಹಸೀಲ್ದಾರ ಕಾವ್ಯಶ್ರೀ ಎಚ್, ತಾ.ಪಂ.ಇಒ ಸತೀಶ ಮಾಕೊಂಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಎಸ್.ಮಳಿಮಠ, ಬಿಸಿಎಂ ಅಽಕಾರಿ ಹೇಮಲತಾ ಸಿಂಧೆ, ಬಿಇಒ ಕೇಶವ ಪೆಟ್ಲೂರ, ಅಕ್ಷರದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮಹಾಂತೇಶ ನಾರಗಲ್ ಸೇರಿದಂತೆ ಇತರರು ಇದ್ದರು. ಸಾಹಿತಿ ಸದಾಶಿವ ಮರಡಿ ನಿರೂಪಿಸಿದರು.