ವಾಲಿದ ಹಾಕಿ ಟರ್ಫ್ ಮೈದಾನದ ತಡೆಗೋಡೆ

Oplus_16777216
Oplus_16777216
Published on

ಸೋಮವಾರಪೇಟೆ: ಪಟ್ಟಣದ ಜೂನಿಯರ್ ಕಾಲೇಜು ಮುಂಭಾಗದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನದಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ ನಿರ್ಮಿಸಿದ ತಡೆಗೋಡೆ ಪ್ರಥಮ ಮಳೆಗೆ ಒಂದು ಬದಿಗೆ ವಾಲಿದ್ದು, ಆತಂಕ ಸೃಷ್ಟಿಸಿದೆ.

40 ಲಕ್ಷ ರೂ.ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಾಣಗೊಂಡ ತಡೆಗೋಡೆ ಮತ್ತು ಮೈದಾನದ ಮಧ್ಯೆ ಸುರಿದಿದ್ದ ಮಣ್ಣು ಜರುಗಿರುವ ಪರಿಣಾಮ ತಡೆಗೋಡೆ ವಾಲಿದೆ. ಮಳೆ ಜಾಸ್ತಿಯಾದರೆ ತಡೆಗೋಡೆ ರಸ್ತೆ ಮೇಲೆ ಬೀಳುವ ಆತಂಕ ಎದುರಾಗಿದೆ.

ತಡೆಗೋಡೆಯ ನಡುಭಾಗಕ್ಕೆ ಹಾಕಿರುವ ಮಣ್ಣು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದಲ್ಲಿ ವಾಲಿದೆ. ಮಳೆ ಕಡಿಮೆಯಾದ ನಂತರ ಮಣ್ಣನ್ನು ತೆಗೆದು, ಕೀ ವಾಲ್‌ಗಳನ್ನು ಅಳವಡಿಸಲಾಗುವುದು. ತಡೆಗೋಡೆ ಸಂಪೂರ್ಣ ಕುಸಿಯುವ ಅಥವಾ ಬೀಳುವ ಆತಂಕ ಇಲ್ಲ ಎಂದು ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಕುಮಾರಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net