ವಾರದ ಸಂತೆಯಲ್ಲಿಲ್ಲ ಕರೊನಾ ಭಯ

11 YLP 01 A
Published on

ಯಲ್ಲಾಪುರ: ಪಟ್ಟಣದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇದನ್ನು ತಡೆಗಟ್ಟುವ ಸಲುವಾಗಿ ಪ್ರತಿಯೊಬ್ಬರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ತಹಸೀಲ್ದಾರ್ ಗಣಪತಿ ಶಾಸ್ತ್ರಿ ಹೇಳಿದರು.

ರಂಗ ಸಹ್ಯಾದ್ರಿ ಯಲ್ಲಾಪುರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಯುವ ಒಕ್ಕೂಟ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರೊನಾ ಜಾಗೃತಿ ಅಭಿಯಾನಕ್ಕೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

ತಹಸೀಲ್ದಾರ ಕಚೇರಿಯಿಂದ ಜಾಥಾ ಮೂಲಕ ಪಟ್ಟಣದ ವಿವಿಧೆಡೆ ತೆರಳಿ ಕರೊನಾ ಜಾಗೃತಿ ಮೂಡಿಸಲಾಯಿತು. ಮಾಸ್ಕ್ ಧರಿಸದೇ ಇದ್ದವರಿಗೆ ಉಚಿತ ಮಾಸ್ಕ್ ವಿತರಿಸಲಾಯಿತು.

ಜಾಥಾದಲ್ಲಿ ಶಿರಸಿಯ ಅದ್ವೈತ ಸ್ಕೇಟಿಂಗ್ ಕ್ಲಬ್​ನ ವಿದ್ಯಾರ್ಥಿಗಳು ಸ್ಕೇಟಿಂಗ್ ಮೂಲಕ ಜಾಗೃತಿ ಮೂಡಿಸಿದರು. 5 ವರ್ಷದ ಅದ್ವೈತ ಸ್ಕೇಟಿಂಗ್ ಸಾಹಸ ಪ್ರದರ್ಶಿಸಿ ಗಮನ ಸೆಳೆದರು. ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ಪಿಎಸ್​ಐ ಮಂಜುನಾಥ ಗೌಡರ್, ತಾ.ಪಂ ಲೆಕ್ಕಾಧಿಕಾರಿ ಮೋಹನ್, ಶಿಕ್ಷಣ ಇಲಾಖೆಯ ದಿಲೀಪ ದೊಡ್ಡಮನಿ, ವಿಶಾಲ ನಾಯಕ, ರಂಗ ಸಹ್ಯಾದ್ರಿ ಅಧ್ಯಕ್ಷ ಡಿ. ಎನ್. ಗಾಂವ್ಕಾರ್, ಗೃಹರಕ್ಷಕ ದಳದ ಘಟಕಾಧಿಕಾರಿ ಕೆ. ಎಸ್. ಭಟ್ಟ ಆನಗೋಡ, ಪ.ಪಂ ಆರೋಗ್ಯ ನಿರೀಕ್ಷ ಗುರು, ಸ್ಕೇಟಿಂಗ್ ತರಬೇತುದಾರ ದಿಲೀಪ ಶಿರಸಿ, ಅಂತಾರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಪಟು ಕೀರ್ತಿ ಹುಕ್ಕೇರಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನರಸಿಂಹ ಸಾತೊಡ್ಡಿ, ಉಪಾಧ್ಯಕ್ಷ ಜಿ. ಎನ್. ಭಟ್ಟ ತಟ್ಟಿಗದ್ದೆ, ಖಜಾಂಚಿ ಪ್ರಭಾವತಿ ಜಯರಾಜ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ ಮದ್ಗುಣಿ, ಪತ್ರಕರ್ತರಾದ ಕೇಬಲ್ ನಾಗೇಶ, ಜಯರಾಜ ಗೋವಿ, ಯುವ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ಸತೀಶ ನಾಯ್ಕ, ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀಧರ ಅಣಲಗಾರ, ಗೌರವ ಸಲಹೆಗಾರರಾದ ಸುಬ್ರಾಯ ಬಿದ್ರೆಮನೆ, ಸಣ್ಣಪ್ಪ ಭಾಗ್ವತ, ರಂಗ ಸಹ್ಯಾದ್ರಿ ಬಳಗದ ಸದಸ್ಯರು, ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net