ವಾಟರ್ ಬಾಟಲ್ ನಲ್ಲಿ ಅರಳಿದ ಗಣೇಶ..!

6cdf0fcc-fdcd-4867-bf5d-b5fcb5d96a80
ವಾಟರ್ ಬಾಟಲ್ ನಲ್ಲಿ ಗಣೇಶ ಮೂರ್ತಿ ನಿರ್ಮಾಣ
Published on

ಬಾಗಲಕೋಟೆ: ಗಣೇಶ ಉತ್ಸವಕ್ಕೆ ವಿನೂತನವಾಗಿ ಇಳಕಲ್ಲ ನಗರದ ವಿಜಯ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಈ ಬಾರಿ 20 ಅಡಿಯ ವಾಟರ್ ಬಾಟಲ್ ನಲ್ಲಿ ಗಣೇಶ ಮೂರ್ತಿ ನಿರ್ಮಾಣ ಮಾಡಿದ್ದು ಗಮನ ಸೆಳೆಯಿತು.
ಕಳೆದ 30 ವರ್ಷಗಳಿಂದ ವಿಭಿನ್ನವಾದ ಗಣೇಶ ಮೂರ್ತಿ ನಿರ್ಮಾಣ ಮಾಡುವುದು ವಿಜಯ ಚಿತ್ರಕಲಾ ಮಹಾವಿದ್ಯಾಲಯದ ವಿಶೇಷತೆ. ಪರಿಸರ ಜಾಗೃತಿ ಹಾಗೂ ಕಸದಿಂದ ರಸ ಎನ್ನುವ ವಾಕ್ಯದಂತೆ ನಿರುಪಯುಕ್ತ ವಾಟರ್ ಬಾಟಲಗಳಿಂದ ಗಣೇಶ ಮೂರ್ತಿ ಸಿದ್ದಪಡಿಸಿದ್ದಾರೆ ಗುರು -ಶಿಷ್ಯ ವೃಂದ. ಬರೋಬ್ಬರಿ 20 ಅಡಿ ಎತ್ತರ ಗಣೇಶ ಮೂರ್ತಿ ನಿರ್ಮಾಣ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳು ಡಾಬಾ, ಬೀದಿ, ಹೊಟೇಲಗಳಿಗೆ ಸಂಚರಿಸಿ ನೂರಾರು ಬಾಟಲ್ ಗಳನ್ನು ಸಂಗ್ರಹಿಸಿದ್ದರು. ಅಲ್ಲದೆ ಅವುಗಳನ್ನು ಶುಚಿಗೊಳಿಸಿ ಬಳಸಲಾಗಿದೆ. ಪ್ರಾಚಾರ್ಯ ಡಾ. ಬಸವರಾಜ ಗವಿಮಠ ಮಾರ್ಗದರ್ಶನದಲ್ಲಿ ಉಪನ್ಯಾಸಕರಾದ ಎಂ.ಬಿ.ಬಡಿಗೇರ, ಸಿದ್ದು ಹಿರೇಮಠ ಕಾರ್ಯಕ್ಕೆ 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.
ಈ ಹಿಂದೆ ಗಣೇಶ ಉತ್ಸವ ಸಂದರ್ಭದಲ್ಲಿ ಗ್ರಾನೈಟ್ ಗಣಪ, ಗ್ಯಾರೇಜ್ ಗಣಪ, ಬಳಚೂರು ಗಣಪ, ನ್ಯೂಸ್ ಪೇಪರ್ ಗಣಪ, ಸ್ವದೇಶಿ ಕಡ್ಡಿಪಟ್ಟಣ ಗಣಪ, ವಾಕ್ಸಿನ್, ಸಂತ್ರಸ್ತರ ರಕ್ಷಕ ಗಣೇಶ, ಓಝೊನ್ ಗಣೇಶ ಸೇರಿದಂತೆ ಸಮಾಜಕ್ಕೆ ಹಲವು ಸಂದೇಶ ನೀಡುವ ಕಲಾಕೃತಿ ಗಣೇಶಗಳನ್ನು ನಿರ್ಮಿಸಿದ್ದು ಸಾರ್ವಜನಿಕರ ಮೆಚ್ಚುಗೆ ಪಾತ್ರವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net