ವಾಕಥಾನ್​ನಲ್ಲಿ ವಿದ್ಯಾರ್ಥಿಗಳ ಪಾರಮ್ಯ

16KWR5
Published on

ಕಾರವಾರ: ರೋಟರಿ ಕ್ಲಬ್ ದಕ್ಷಿಣ ಸಂಘಟನೆಯಿಂದ ನಗರದಲ್ಲಿ ಭಾನುವಾರ ಆಯೋಜಿಸಿದ ವಾಕಥಾನ್​ನಲ್ಲಿ ಹಬ್ಬುವಾಡ ಕ್ರೀಡಾ ವಸತಿ ಶಾಲೆಯ ವಿದ್ಯಾರ್ಥಿಗಳು ಪಾರಮ್ಯ ಮೆರೆದಿದ್ದಾರೆ. ಸಾಮಾನ್ಯ ಮಹಿಳೆ ಮತ್ತು ಪುರುಷರ ವಿಭಾಗದಲ್ಲಿ ಒಟ್ಟು 5 ಸ್ಥಾನಗಳನ್ನು ಪಡೆದುಕೊಂಡಿದ್ದಾರೆ. ಮಾಲಾದೇವಿ ಮೈದಾನದಿಂದ ಹೊರಟು ನಗರದಲ್ಲಿ 10 ಕಿಮೀ ಸಂಚರಿಸುವ ಸ್ಪರ್ಧೆ ಇದಾಗಿತ್ತು. ನೂರಕ್ಕೂ ಅಧಿಕ ಹಿರಿ, ಕಿರಿಯ ಸ್ಪರ್ಧಾಳುಗಳು ಭಾಗವಹಿಸಿದ್ದರು.

ಸಾಮಾನ್ಯ ಪುರುಷರ ವಿಭಾಗದಲ್ಲಿ ಶಿವಾಜಿ ಮಾದಪ್ಪ ಗೌಡರ್, ರಾಕೇಶ ಹನುಮಾನ್ ಕುಮಾರ್, ಗಿಪ್ಸ್ ಸಿದ್ದಿ, ಮಹಿಳೆಯರ ವಿಭಾಗದಲ್ಲಿ ವೆಲನಿಕಾ ಬೆಳಗಾಂವಕರ್, ಭವಾನಿ ಕೆ.ಸಿದ್ದಿ, ರುಚಿತಾ ಜಿ.ನ್ಯಾಸರ್ಗಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದುಕೊಂಡರು. ಹಿರಿಯ ಮಹಿಳೆಯರ ವಿಭಾಗದಲ್ಲಿ ಶಿವಮ್ಮಾ ನಾಯಕ, ಡಾ.ಶುಭಶ್ರೀ ದೇಸಾಯಿ, ಪುರುಷರ ವಿಭಾಗದಲ್ಲಿ ಉದಯ ಜೆ.ನಾಯ್ಕ, ಡಿ.ಜೆ. ನಾಯ್ಕ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು. ಎನ್​ಸಿಸಿ ಪುರುಷರ ವಿಭಾಗದಲ್ಲಿ ನೀಲನಗೌಡ ಹೊಸ ಗೌಡರ್, ಮಹಿಳೆಯರ ವಿಭಾಗದಲ್ಲಿ ದೀಪಾಲಿ ಜಿ.ನಾಯ್ಕ ಮೊದಲ ಸ್ಥಾನ ಪಡೆದರು. ಡಾ.ಶುಭಶ್ರೀ ದೇಸಾಯಿ ವಾಕಥಾನ್​ನಲ್ಲಿ ಭಾಗವಹಿಸಿದ ಅತಿ ಹಿರಿಯ ಮಹಿಳೆಯಾದರೆ ಭರತ್ ಕುಮಾರ್ ಅತಿ ಹಿರಿಯ ಪುರುಷರಾಗಿದ್ದರು. ಸುಖೇಶ ಆರ್.ನಾಯ್ಕ ಹಾಗೂ ಪ್ರವೀಣಾ ಕಡವಾಡಕರ್ ಅತಿ ಕಿರಿಯ ಸ್ಪರ್ಧಿಗಳಾಗಿದ್ದರು. ರೋಟರಿ ಪದಾಧಿಕಾರಿಗಳು ಸಂಘಟಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net