ವಸತಿ ಯೋಜನೆ ಹಣ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

25GTL1
Published on

ಗುತ್ತಲ: ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಹಣ ಜಮೆ ಆಗದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪಟ್ಟಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು.

ಕರವೇ ತಾಲೂಕು ಅಧ್ಯಕ್ಷ ಹಾಲೇಶ ಹಾಲಣ್ಣನವರ ಮಾತನಾಡಿ, ಸರ್ಕಾರ ಹೆಚ್ಚುವರಿ ಹಣ ಬಿಡುಗಡೆ ಮಾಡದಿರುವ ಕಾರಣಕ್ಕೆ ಫಲಾನುಭವಿಗಳಿಗೆ ತೊಂದರೆಯಾಗಿದೆ. ಫಲಾನುಭವಿಗಳ ಸಂಕಷ್ಟ ಅರಿತು ಶೀಘ್ರವೇ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಾಮಾಜಿಕ ಅಭಿವೃದ್ಧಿ ತಜ್ಞ ನಾಗರಾಜ ಗುಳೇದ ಮನವಿ ಸ್ವೀಕರಿಸಿ, ಕೆಲವು ನ್ಯೂನತೆಗಳು ಇದ್ದ ಕಾರಣಕ್ಕೆ ಹಣ ಜಮೆ ಆಗುವಲ್ಲಿ ವಿಳಂಬವಾಗಿದೆ. ರಾಜೀವ ಗಾಂಧಿ ವಸತಿ ನಿಗಮದಿಂದ ನಿರ್ದೇಶನ ಬಂದಿದ್ದು, ಅದರಂತೆ ಪರಿಶೀಲಿಸಿ ಫಲಾನುಭವಿಗಳಿಗೆ ಶೀಘ್ರದಲ್ಲಿ ಹಣ ಜಮೆ ಮಾಡುತ್ತೇವೆ ಎಂದರು. ಪ.ಪಂ. ಮುಖ್ಯಾಧಿಕಾರಿ ಏಸು ಬೆಂಗಳೂರ, ಕರವೇ ಜಿಲ್ಲಾಪ್ರಧಾನ ಕಾರ್ಯದರ್ಶಿ ಯಶವಂತಗೌಡ್ರ ದೊಡ್ಡಗೌಡ್ರ, ಹೊಬಳಿ ಘಟಕದ ಅಧ್ಯಕ್ಷ ಚನ್ನಪ್ಪ ಹೊನ್ನಮ್ಮನವರ, ನಗರ ಘಟಕದ ಅಧ್ಯಕ್ಷ ದಾದಪೀರ ಖಾಲೇಕಾಲನವರ, ನಗರ ಘಟಕದ ಉಪಾಧ್ಯಕ್ಷ ಶೇಖರ ನರಸಣ್ಣನವರ, ಯುವ ಘಟಕದ ಅಧ್ಯಕ್ಷ ಫಕ್ರುದ್ದೀನ್ ಅಂಗಡಿಕಾರ, ಪ್ರಧಾನ ಕಾರ್ಯದರ್ಶಿ ಕರಬಸು ಕುರುಬಗೇರಿ, ಗೌಸಪಾಕ ಬಾಲೇಭಾಯಿ, ಶಿವು ಬೆನ್ನೂರ, ರೇಹಾನ ಮುಜಾವರ, ಯೋಜನೆ ಫಲಾನುಭವಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net