ವರ್ಷದಲ್ಲಿ ಏಳು ದಿನ ಮಾತ್ರ ತೆಗೆದಿರುತ್ತೆ ಈ ದೇವಸ್ಥಾನದ ಬಾಗಿಲು

4KWR3.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ವರ್ಷದ ಏಳು ದಿನ ಮಾತ್ರ ಪೂಜಾಲಂಕಾರಗೊಳ್ಳುವ ಹಣಕೋಣದ ಸಾತೇರಿ ದೇವಸ್ಥಾನದ ಬಾಗಿಲು ತೆರೆದಿದ್ದು, ಸೆ. 5 ರಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶವಿದೆ.

ಭಕ್ತರ ಇಷ್ಟಾರ್ಥ ಸಿದ್ಧಿಸುವ ದೇವಿ ಎಂದೇ ಪ್ರಸಿದ್ಧವಾಗಿರುವ ಶ್ರೀ ಸಾತೇರಿ ದೇವಿಗೆ ಪೂಜೆ ಸಲ್ಲಿಸಲು ರಾಜ್ಯ, ಹೊರ ರಾಜ್ಯಗಳಿಂದ ಜನ ಆಗಮಿಸುತ್ತಾರೆ. ಉಡಿ, ತುಲಾಭಾರ ಮುಂತಾದ ಹರಕೆ ಒಪ್ಪಿಸುತ್ತಾರೆ.
ಶನಿವಾರ ಮಧ್ಯರಾತ್ರಿ ಬಾಗಿಲು ತೆರೆದುಕೊಂಡಿದ್ದು, ಭಾನುವಾರ ಸ್ಥಳೀಯ ಕುಳಾವಿಗಳು ದೇವರಿಗೆ ಪೂಜೆ ಸಲ್ಲಿಸಿದರು. ಕುಮಾರಿ ಹಾಗೂ ಸ್ತ್ರೀಯರಿಂದ ಅಡಕೆ ಹಾಗೂ ಗಂಡಸರಿಂದ ತುಳಯಿ ಸಲ್ಲಿಕೆಯಾಯಿತು. ಸೆ. 5 ರ ಬೆಳಗ್ಗೆಯಿಂದ ಸೆ.9 ರ ಸಾಯಂಕಾಲ 4 ಗಂಟೆಯವರೆಗೆ ಸಾರ್ವಜನಿಕರಿಂದ ಸೇವೆ ಸ್ವೀಕರಿಸಲಾಗುವುದು. ಸೆ.6 ರಿಂದ 8 ರವರೆಗೆ ಪ್ರತಿ ದಿನ ಬೆಳಗ್ಗೆ 10 ರಿಂದ ಸಾಯಂಕಾಲ 4 ರವರೆಗೆ ಅನ್ನ ಪ್ರಸಾದ ಭೂಜನ ವ್ಯವಸ್ಥೆ ಇರಲಿದೆ. ಮಾರುತಿ ಕೃಷ್ಣ ನಾಯ್ಕ, ಮಹಾದೇವ ನಾಯ್ಕ, ರವಿ ರಾಮಚಂದ್ರ ನಾಯ್ಕ ಪ್ರಾಯೋಜಿಸುವರು.
ವಿವಿಧ ಕಾರ್ಯಕ್ರಮ:
ಸೆ. 5 ರಿಂದ 8 ರವರೆಗೆ ಪ್ರತಿ ದಿನ ಸಾಯಂಕಾಲ 7 ರಿಂದ 9.15 ರವರೆಗೆ ಭಕ್ತಿ ಸಂಗೀತ ಕಾರ್ಯಕ್ರಮಗಳು ಜರುಗಲಿವೆ. ಸೆ. 5 ರಂದು ಸದಾಶಿವಗಡ ಓಂಕಾರ ಭಕ್ತಿ ಸಂಗೀತ ಮಂಡಳಿಯಿAದ, ಸೆ. 6 ರಂದು ರಾಮದಾಸ ರಾಯ್ಕರ್ ತಂಡದಿಂದ, 7 ರಂದು ಗೋವಾ ಕಾಣಕೋಣದ ಭಕ್ತ ಸಂಗೀತ ಮಂಡಳಿಯಿಂದ, ಸೆ. 8 ರಂದು ಮಾಜಾಳಿಯ ಸಂಕಟಮೋಚನ ಹನುಮಾನ್ ಭಕ್ತ ಮಂಡಳಿಯಿAದ ಭಜನಾ ಕಾರ್ಯಕ್ರಮ ನಡೆಯಲಿವೆ. ಕರ್ನಾಟಕದ ವಿವಿಧ ಭಾಗಗಳಿಂದ, ಅಲ್ಲದೆ, ಗೋವಾ ಮಹಾರಾಷ್ಟ್ರ ದಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net