

ಸಿದ್ದಾಪುರ: ನಿರಂತರ ಮಳೆಯಿಂದಾಗಿ ಸಿದ್ದಾಪುರ ಸೇರಿ ಮಾಲ್ದಾರೆ, ಕರಡಿಗೋಡು, ಇಂಜಿಲಗೇರಿ, ಬಾಡಗ -ಬಾಣಂಗಾಲ, ಸುತ್ತ ಮುತ್ತಲ ಗ್ರಾಮಗಳ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಈ ಭಾಗದ ಜನತೆ ಕತ್ತಲಲ್ಲಿ ದಿನ ಕಳೆಯುವಂತಾಗಿದೆ.
ಸಿದ್ದಾಪುರ ವ್ಯಾಪ್ತಿಗೆ ವಿದ್ಯುತ್ ಸಂಪರ್ಕ ನೀಡುವ 33 ಕೆ.ವಿ. ವಿದ್ಯುತ್ ಮಾರ್ಗದ ಮೇಲೆ ಆನಂದಪುರ ಟಾಟಾ ಕಾಫಿ ಹತ್ತಿರ ಶುಕ್ರವಾರ ಸಂಜೆ ಬೃಹತ್ ಗಾತ್ರದ ಮರ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಗಾಳಿ, ಮಳೆಯ ನಡುವೆಯೂ ಸೆಸ್ಕ್ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.