

ಬಾಗಲಕೋಟೆ: ಯಾವ ಸಮಾಜದವರನ್ನು ನಿಂದಿಸದೇ ಬ್ರಾಹ್ಮಣ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದು ತಪ್ಪು ಎಂದು ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳು ಹೇಳಿರುವುದು ಸತ್ಯವಾಗಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಸಹಕಾರ್ಯದರ್ಶಿ ವಿನಾಯಕ ತಾಳಿಕೋಟಿ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಶ್ರೀಗಳು ಬ್ರಾಹ್ಮಣ ಸಮಾಜದ ಬಗ್ಗೆ ಅವರು ಹೇಳಿದ್ದು ಸ್ವಾಗತಾರ್ಹ. ಬ್ರಾಹ್ಮಣ ಸಮಾಜದವರು ಯಾವತ್ತೂ ಯಾವ ಸಮಾಜದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಉಳಿದ ಸಮುದಾಯದವರೇ ಬ್ರಾಹ್ಮಣರನ್ನು ಹೀಯಾಳಿಸುತ್ತಾರೆ. ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿರಬೇಕು ಎಂದು ಶ್ರೀಗಳು ಹೇಳಿರುವುದು ಸತ್ಯವಾಗಿದೆ. ಬ್ರಾಹ್ಮಣ ಸಮಾಜದವರು ಎಲ್ಲ ಸಮಾಜ ಬಂಧುಗಳೊಂದಿಗೆ ಸೌಹಾರ್ದವಾಗಿದ್ದಾರೆ ಮತ್ತು ಮುಂದೆಯೂ ಸೌಹಾರ್ದದಿಂದ ಇರುತ್ತಾರೆ ಎಂದಿರುವುದು ನಿಜಕ್ಕೂ ಮೆಚ್ಚುವಂತಹದ್ದು ಎಂದು ತಿಳಿಸಿದ್ದಾರೆ.