

ಬಾಗಲಕೋಟೆ: ಕಾಯಕ ಯೋಗಿ ನೂಲಿ ಚಂದಯ್ಯ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದರು ಅಲ್ಲದೇ ಅವರ ವಚನಗಳು ಸಹ ಸ್ವಾಭಿಮಾನದ ಕುರಿತಾಗಿದ್ದವು ಎಂದು ಭಜಂತ್ರಿ ಸಮಾಜದ ಅಧ್ಯಕ್ಷ ಶ್ರೀಶೈಲ ಭಜಂತ್ರಿ ಹೇಳಿದರು.
ಗುಡೂರ ಎಸ್ ಸಿ ಗ್ರಾಮದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಿದ್ದ ನೂಲಿಯ ಚಂದಯ್ಯ ಆಚರಣೆಯಲ್ಲಿ ಮಾತನಾಡಿದ ಅವರು ನೂಲಿ ಚಂದಯ್ಯ ತಳ ಸಮುದಾಯದಲ್ಲಿ ಹುಟ್ಟಿ ಶ್ರೇಷ್ಠ ವಚನಗಳನ್ನು ರಚಿಸಿ ಸಮಾಜದ ಕಣ್ಣಡಿಯಾಗಿದ್ದಾರೆ. ಇವರು ಒಟ್ಟು 48 ವಚನಗಳನ್ನು ರಚಿಸಿದ್ದು, ಅವುಗಳೆಲ್ಲವೂ ಸಮಾಜವನ್ನು ತಿದ್ದುವ, ಎಚ್ಚರಿಸುವ ವಚನಗಳಾಗಿವೆ. ಚಂದಯ್ಯನ ವಚನ್ನಗಳನ್ನು ನಿತ್ಯ ಪಠಿಸಬೇಕು. ವಚನಗಳ ಸಾರವನ್ನು ಅರಿಯಬೇಕು. ಆಗ ಮಾತ್ರ ನೂಲಿ ಚಂದಯ್ಯ ಜಯಂತಿ ಮಾಡಿದ್ದು ಸಾರ್ಥಕವಾಗುತ್ತದೆ ಎಂದು ಹೇಳಿದರು.
ನೂಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಪಣೆಯ ನಂತರ ಗ್ರಾಮ ಪಂಚಾಯತ ಅಧ್ಯಕ್ಷ ಶಶೀಧರ ಮ್ಯಾಗೇರಿ ಮಾತನಾಡಿ ನುಡಿದಂತೆ ನಡೆದ ನೂಲಿ ಚಂದಯ್ಯ ಅವರು ಶ್ರೇಷ್ಠ ಕಾಯಕ ಜೀವಿ. ಇವರ ಜೀವನಾದರ್ಶಗಳನ್ನು ನಮ್ಮ ಬದುಕಲ್ಲಿ ಪಾಲಿಸಬೇಕು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಸವರಾಜ ರೇವಡಿ., ಭಜಂತ್ರಿ ಸಮಾಜದ ಉಪಾಧ್ಯಕ್ಷ ಶಶಿಕಾಂತ ಭಜಂತ್ರಿ., ಯಮನಪ್ಪ ಭಜಂತ್ರಿ., ಮಾರುತಿ ಭಜಂತ್ರಿ., ಗದ್ದೆಪ್ಪ ಭಜಂತ್ರಿ., ಮಳಿಯಪ್ಪ ಭಜಂತ್ರಿ., ಶಿವಾನಂದ ಭಜಂತ್ರಿ., ಶಿವಪ್ಪ ಭಜಂತ್ರಿ., ಮುತ್ತಪ್ಪ ಭಜಂತ್ರಿ., ರಾಮಪ್ಪ ಭಜಂತ್ರಿ ಸೇರಿದಂತೆ ಗ್ರಾಪಂ ಸದಸ್ಯರು., ಸಿಬ್ಬಂದಿ ವರ್ಗದವರು ಹಾಗೂ ಇತರರಿದ್ದರು.