ವಚನ ಸಾಹಿತ್ಯದಿಂದ ಸಮ ಸಮಾಜ

25 mlv1
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಮಳವಳ್ಳಿ: ಮೇಲು ಕೀಳೆಂಬ ತಾರತಮ್ಯ ಹೋಗಲಾಡಿಸಲು ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜದ ನಿರ್ಮಾಣಕ್ಕಾಗಿ ನಡೆಸಿದ ಕ್ರಾಂತಿಕಾರಿ ನಿರ್ಣಯಗಳನ್ನೇ ಪ್ರಸ್ತುತ ನಮ್ಮ ಸಂವಿಧಾನದಲ್ಲಿ ಅಳವಡಿಕೆ ಮಾಡಲಾಗಿದೆ ಎಂದು ಮನ್‌ಮುಲ್ ನಿರ್ದೇಶಕ ಆರ್.ಎನ್.ವಿಶ್ವಾಸ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿದ್ದ ಅಂಕು ಡೊಂಕುಗಳನ್ನು ತಿದ್ದಲು ವಚನ ಸಾಹಿತ್ಯದಿಂದ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಜಾತೀಯತೆಯನ್ನು ಹೋಗಲಾಡಿಸಲು ಅನುಭವ ಮಂಟಪ ಸ್ಥಾಪನೆ ಮೂಲಕ ಸಮಾಜ ಸುಧಾರಣೆಗೆ ಆಮೂಲಾಗ್ರ ಬದಲಾವಣೆಗೆ ದಿಟ್ಟ ಕ್ರಮ ಕೈಗೊಂಡಿದ್ದವರು ಬಸವಣ್ಣನವರು. ಅಂತಹ ಅನುಭವ ಮಂಟಪದ ನಿರ್ವಹಣೆಯ ಹೊಣೆಯನ್ನು ನಿರ್ವಹಿಸಿದ್ದವರು ಬಸವಣ್ಣನವರ ನೆಚ್ಚಿನ ಶಿಷ್ಯರಾಗಿದ್ದ ಹಡಪದ ಅಪ್ಪಣ್ಣ ಎಂದರು.

ಸುಮಾರು 250ಕ್ಕೂ ಹೆಚ್ಚು ವಚನ ರಚಿಸಿ ಸಮಾಜದಲ್ಲಿನ ಅಂಧಕಾರ ಹಾಗೂ ಮೂಢನಂಬಿಕೆಗಳನ್ನು ಹೋಗಲಾಡಿಸಲು ವಚನ ಸಾಹಿತ್ಯದ ಮೂಲಕ ಜಾಗೃತಿ ಮೂಡಿಸಿದ್ದವರು ಹಡಪದ ಅಪ್ಪಣ್ಣನವರು. ಇಂದಿನ ನಮ್ಮ ಸಂವಿಧಾನದ ಮೂಲವೂ ಬಸವಣ್ಣನವರು ಅಂದು ಜಾರಿಗೊಳಿಸಿದ್ದ ಸಮಾನತೆಯ ನಿರ್ಣಯಗಳ ಸಾಮ್ಯತೆಗಳನ್ನು ಒಳಗೊಂಡಿದೆ ಎಂದು ಹೇಳಿದರು.

ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಮಹದೇವು ಅವರು ಹಡಪದ ಅಪ್ಪಣ್ಣ ಕುರಿತು ಉಪನ್ಯಾಸ ನೀಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಂ.ಎನ್.ಮಹೇಶ್ ಕುಮಾರ್, ಸಾಲುಮರ ನಾಗರಾಜು, ಯೋಗಗುರು ಮಲ್ಲಿಕಾರ್ಜುನಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಸವಿತಾ ಸಮಾಜದ ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷ ಬಿ.ಕೆಂಪರಾಜು, ಗೌರವಾಧ್ಯಕ್ಷ ನಾಗರಾಜು, ಉಪಾಧ್ಯಕ್ಷ ಕುನ್ನಯ್ಯ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಶಂಕರಮೂರ್ತಿ, ಶಿರಸ್ತೇದಾರ್ ನಾಗವೇಣಿ, ರಾಜಸ್ವ ನಿರೀಕ್ಷಕ ಲಿಂಗಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net