

ಬಾಗಲಕೋಟೆ: ಕನ್ನಡ ಸಾಹಿತ್ಯಕ್ಕೆ ವಚನ ಚಳುವಳಿಯ ಕೊಡುಗೆ ಅಪಾರವಾಗಿದೆ. ಸಾಮಾಜಿಕ ಬದಲಾವಣೆ ಸಾಕ್ಷಿಕರಿಸಿದೆ ಎಂದು ಅಪರ ಜಿಲ್ಲಾಽಕಾರಿ ಪರಶುರಾಮ ಶಿನ್ನಾಳಕರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡ ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಶರಣರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ಅರ್ಪಿಸಿ ಅವರು ಮಾತನಾಡಿದರು.
ಸಂವಿಧಾನವೆAಬ ಸಮಾನತೆ ಸಾರುವ ಪ್ರಬಲ ಅಸ್ತçಕ್ಕೂ ಸ್ಪೋರ್ತಿಯಾಗಿರುವುದು ವಚನ ಚಳುವಳಿ. ಆದರೆ ಇಂದಿನ ಸಮಾಜದಲ್ಲಿ ಸಾಧಕರನ್ನು ಜಾತಿಯಿಂದ ಗುರುತಿಸುತ್ತಿರುವುದು ವಿಷಾದನೀಯವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶರಣ ತತ್ವ ಚಿಂತಕ ಜೆ.ಎಸ್.ಪಾಟೀಲ ಮಾತನಾಡಿ, ಹನ್ನೆರಡನೇ ಶತಮಾನದಲ್ಲಿ ಬಸವಣ್ಣವರ ಕಾಯಕ ಮತ್ತು ದಾಸೋಹ ಇವರೆರಡು ಆರ್ಥಿಕ ಸೂತ್ರಗಳಾಗಿದ್ದವು. ಬುದ್ಧ, ಬಸವ ಮತ್ತು ಅಂಬೇಡ್ಕರ್ ಪ್ರತಿಪಾದಿಸಿದ ಸಂಸ್ಕೃತಿ ನೆಲಮೂಲ ಸಂಸ್ಕೃತಿಯಾಗಿದ್ದು, ಅಸಮಾನತೆ, ಜಾತಿ ನಿರ್ಮೂಲನೆಗಾಗಿ ಚಳುವಳಿಗಳು ಹುಟ್ಟಿಕೊಂಡವು. ಇದರ ಪರಿಹಾರವಾಗಿಯೇ ಬಸವಣ್ಣವ ಕಾಯಕ ಮತ್ತು ದಾಸೋಹಗಳು ಆರ್ಥಿಕ ಸೂತ್ರಗಳಾಗಿದ್ದವು ಎಂದು ಹೇಳಿದರು.
ಸ್ವಾತಂತ್ರ‍್ಯ ಚಳುವಳಿಗೂ ಮುನ್ನವೇ ಆರ್ಯ, ಬುದ್ಧನ ಅಹಿಂಸೆ ಮತ್ತು ಬಸವಣ್ಣನವರ ಕ್ರಾಂತಿಯ ಮೂಲಕ ಮೂರು ಸ್ವಾತಂತ್ರ‍್ಯ ಸಂಗ್ರಾಮಗಳು ನಡೆದವು. ಬ್ರಿಟಿಷರ ವಿರುದ್ಧದ ಹೋರಾಟವಷ್ಟೇ ಸ್ವಾತಂತ್ರ‍್ಯ ಸಂಗ್ರಾಮವಲ್ಲ, ಸಾಮಾಜಿಕ ಸ್ವಾತಂತ್ರ‍್ಯಕ್ಕಾಗಿ ನಡೆದ ಹೋರಾಟಗಳು ಕೂಡ ಸ್ವಾತಂತ್ರ‍್ಯ ಸಂಗ್ರಾಮಗಳಾಗಿದ್ದವು ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಽಕಾರಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಸಮುದಾಯದ ಮುಖಂಡರಾದ ವೈ.ವೈ.ತಿಮ್ಮಾಪುರ, ಎ.ಎಸ್.ಚಂದಾವರೆ, ರೇಣುಕಾ ನ್ಯಾಮಗೌಡ, ಪ್ರೇಮಾನಾಥ ಗರಸಂಗಿ, ಮನೋಹರ ಇತರರು ಇದ್ದರು. ಕುಮಾರಿ ವೈಷ್ಣವಿ ಗೂಳಿ ಮತ್ತು ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.