

ಬಾಗಲಕೋಟೆ: ರೈತರ ಜಮೀನುಗಳು ವಕ್ಫ್ ಆಸ್ತಿ ಎನ್ನುವ ವಿವಾದ ಇನ್ನೂ ತಣ್ಣಗಾಗುತ್ತಿಲ್ಲ. ಬದಲಿಗೆ ದಿನೇ ದಿನೇ ಇಂಥ ಪ್ರಕರಣಗಳು ವಿವಿಧೆಡೆ ಬೆಳಕಿಗೆ ಬರುತ್ತಲೆ ಇವೆ. ಇದೀಗ ಆ ಪಟ್ಟಿಗೆ ಜಿಲ್ಲೆಯ ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ರೈತರ ಸೇರಿದ್ದಾರೆ.
ಗ್ರಾಮದ ೭೦ಕ್ಕೂ ಅಽಕ ರೈತರ ೨೦೯ ಎಕರೆ ಜಮೀನು ವಕ್ಫ್ ಸಂಬಂಽಸಿದ್ದು, ಈ ಬಗ್ಗೆ ರೈತರ ಪಹಣಿ ಪತ್ರದಲ್ಲಿ ನಮೂದಾಗಿಲ್ಲವಾದರೂ ಬೀಳಗಿ ಉಪ ನೋಂದಣಿ ಹಾಗೂ ಮುದ್ರಾಂಕ ಇಲಾಖೆಯ ರಜಿಸ್ಟರ್ ನಲ್ಲಿ ಸರ್ವೆ ನಂಬರ್ ಹಾಕಿ, ಇದು ವಕ್ ಬೋರ್ಡ್ಗೆ ಸಂಬಂಽಸಿದ್ದು ಎಂದು ಕೂಡಿಸಿದ್ದಾರೆ. ಇದರಿಂದ ರೈತರಿಗೆ ಸಾಲ ಸೌಲಭ್ಯ, ಆಸ್ತಿ ಖರೀದಿ, ಮಾರಾಟ ವ್ಯವಹಾರ ಇಲ್ಲವಾಗಿದೆ ಎಂದು ಆರೋಪಿಸಿದ್ದಾರೆ.
ಇದೇ ವಿಚಾರ ಇಟ್ಟುಕೊಂಡು ಸೋಮವಾರ ಅನಗವಾಡಿ ಗ್ರಾಮದಲ್ಲಿ ರೈತರೆಲ್ಲ ಸೇರಿಕೊಂಡು ವಕ್ ತೊಲಗಿಸಿ, ದೇಶ ಉಳಿಸಿ ಎಂದು ಘೋಷಣೆಯೊಂದಿಗೆ ಬಾರಕೋಲ್ ಪ್ರತಿಭಟನೆ ನಡೆಸಿದರು.
ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತರು ಹೆಗಲಿಗೆ ಬಾರಕೋಲ ಹಾಕಿಕೊಂಡು ಗ್ರಾಮದ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಬಳಿಕ ಬಹಿರಂಗ ಸಭೆ ನಡೆಸಿ, ವಕ್ ಬೋರ್ಡ್ ರದ್ದುಗೊಳಿಸುವಂತೆ ಆಗ್ರಹಿಸಿದರು.
ಈ ವೇಳೆ ವಕ್ಫ್ ವಿರುದ್ಧ ತೀವ್ರ ಕಿಡಿಕಾರದು ಪ್ರತಿಭಟನಾಕಾರರು, ತಲೆ ತಲಾಂತರದಿಂದ ಉಳುಮೆ ಮಾಡಿಕೊಂಡು ಬಂದಿರುವ ರೈತರ ಜಮೀನು ಏಕಾಏಕಿ ವಕ್ ಆಸ್ತಿ ಎಂದರೆ ಹೇಗೆ? ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅಂದರೆ ಜವಹರಲಾಲ್ ನೆಹರು ಅವರಿಂದ ಮನಮೋಹನ್ ಸಿಂಗ್ ವರೆಗೂ ವಕ್ಫ್ ಅನುಕೂಲ ಮಾಡಿಕೊಡುವ ಕಾನೂನು ತಂದು ರೈತರಿಗೆ ಆಪತ್ತು ತಂದೊಡ್ಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಗವಾಡಿ ಗ್ರಾಮದ ವಿಚಾರದಲ್ಲಿ ರೈತರ ಜಮೀನುಗಳ ಪಹಣಿಯಲ್ಲಿ ವಕ್ಫ್ಎಂದಾಗಲಿ, ಇಲ್ಲವೆ ನೋಟಿಸ್ ಕೊಟ್ಟಿಲ್ಲ. ಆದರೆ, ನೋಂದಣಿ ಕಚೇರಿಯ ರಜಿಸ್ಟರ್ ನಲ್ಲಿ ವಕ್ಫ್ ಎಂದು ಸರ್ವೆ ನಂಬರ್ ಗಳಿಗೆ ನೋಂದಾಯಿಸಿದ್ದಾರೆ. ಮುಂಬರುವ ದಿನಗಳಲ್ಲಿ ರೈತರಿಂದ ಜಮೀನು ಕಬಳಿಸುವ ಹುನ್ನಾರ ಇದರಲ್ಲಿ ಅಡಗಿದೆ. ಕೂಡಲೇ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದರಲ್ಲಿ ರೈತರು ಬಾರಲಕೋಲ ಚಳುವಳಿಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಹಿರಂಗ ಸಭೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಬೀಳಗಿ ತಹಸೀಲ್ದಾರ ವಿನೋದ ಹತ್ತಳ್ಳಿ ಅವರ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರ ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಸಲ್ಲಿಸಿದರು. ಈ ವೇಳೆ ಮನವಿ ಸ್ವೀಕರಿಸಿದ ತಹಸೀಲ್ದಾರ್ ಅವರು, ರೈತರ ಪಹಣಿಯಲ್ಲಿ ವಕ್ಫ್ಎಂದು ನಮೂದಿಸಿಲ್ಲ. ಯಾವ ರೈತರಿಗೂ ನೋಟಿಸ್ ಕೊಟ್ಟಿಲ್ಲ. ಈಗ ತಮ್ಮ ಬೇಡಿಕೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಗ್ರಾಮದ ಅನುಸೂಯಾತಾಯಿ ಪೂರ್ಣಾನಂದ ಅವರು ಸಾನ್ನಿಧ್ಯ ವಹಿಸಿದ್ದರು. ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ, ಸುಬ್ಬರಾಯಗೌಡ ಪಾಟೀಲ, ಗುರುನಾಥ ಬಗಲಿ, ಮಲ್ಲಪ್ಪ ಗಾಣಗೇರ, ಮಲ್ಲಪ್ಪ ಮೇಟಿ, ಡಾ.ರಮೇಶ ಅಕ್ಕಿಮರಡಿ, ಎಂ.ವೈ.ವಡವಾನಿ, ರಶ್ಮೀ ಪಾಟೀಲ, ಪವಿತ್ರಾ ಜಂಕಪ್ಪನವರ, ಕುಮಾರ ಯಡಹಳ್ಳಿ, ಅಶೋಕ ಮಂತ್ರಿ, ಶ್ರೀಶೈಲ ಉನದ, ಬಸಯ್ಯ ಮುತ್ತಿಮಠ, ಮಲ್ಲಪ್ಪ ಕುಟಕನಕೇರಿ, ಗುರುಪಾದಯ್ಯ ಕಂಬಿ ಸೇರಿದಂತೆ ಅನೇಕರು ಇದ್ದರು.