ವಕ್ ಬೋರ್ಡ್ ರದ್ದುಗೊಳಿಸಿ

bkt-11-15
ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ಕಾರ್ಯಕರ್ತರು ಸೋಮವಾರ ರಸ್ತೆ ತಡೆ ನಡೆಸಿ ವಕ್ ಬೋರ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Published on

ಬಾಗಲಕೋಟೆ: ವಕ್ ಬೋರ್ಡ್ ರೈತರ ಜಮೀನು ಕಬಳಿಸುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಹೋರಾಟ ನಡೆಸಲಾಯಿತು.

ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಮುಧೋಳ, ಜಮಖಂಡಿ, ಬಾದಾಮಿ, ಹುನಗುಂದ, ಬೀಳಗಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಸಚಿವ ಜಮೀರ ಅಹ್ಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಾಗಲಕೋಟೆ ನಗರದ ಬಸವೇಶ್ವರ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆ ಉದ್ದೇಶಿಸಿ ವಿ.ಪ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ, ವಕ್ ಬೋರ್ಡ್ ರೈತರಿಗೆ ದೊಡ್ಡ ಆಘಾತ ನೀಡಲು ಮುಂದಾಗಿದೆ. ಹೃದಯ, ಕರುಳು ಇಲ್ಲದಂತೆ ವರ್ತಿಸುತ್ತಿದೆ. ಸಚಿವ ಜಮೀರ ಅಹ್ಮದ್ ಖಾನ್ ಮತಾಂಧನಂತೆ ವರ್ತಿಸುತ್ತಿದ್ದಾರೆ. ವಕ್ ಮಂಡಳಿ ರೈತರ ಪಾಲಿಗೆ ಪೆಡಂಭೂತವಾಗಿ ಕಾಡುತ್ತಿದೆ. ಯಾವ ದೇಶದಲ್ಲೂ ಇಲ್ಲದ ಕೆಟ್ಟ ಕಾಯ್ದೆಯೊಂದು ದೇಶದಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಒಬ್ಬರಿಂದಲೇ ಈ ವಿಚಾರದಲ್ಲಿ ರೈತರಿಗೆ ನ್ಯಾಯ ಸಿಗಲು ಸಾಧ್ಯ. ವಕ್ಪ್ ಕಾಯ್ದೆ ತಿದ್ದುಪಡಿಗೆ ಇಡೀ ದೇಶವೇ ಬೆಂಬಲವಾಗಿ ನಿಲ್ಲಬೇಕು ಎಂದು ಕರೆ ನೀಡಿದರು.

ಸಚಿವ ಜಮೀರ್ ಅಹ್ಮದ್ ಖಾನ್ ರಾಜ್ಯದ ಎಲ್ಲ ಜಿಲ್ಲಾಽಕಾರಿಗಳ ಕಚೇರಿಯಲ್ಲಿ ಕುಳಿತು ರೈತರ ಭೂಮಿಯನ್ನು ವಕಗೆ ಪಡೆಯುವ ಹುನ್ನಾರ ಮಾಡಿದ್ದಾರೆ. ನನ್ನ ಪ್ರಕಾರ ಅವರೊಬ್ಬ ಮತಾಂಧ ಎಂದು ಲೇವಡಿ ಮಾಡಿದರು. ವಕ ಕಾಯ್ದೆಯೇ ರದ್ದಾಗಬೇಕೆಂದು ಒತ್ತಾಯಿಸಿದರು.

ಅಯೋಧ್ಯೆ, ಕಾಶಿ, ಮಥುರಾ ಸೇರಿದಂತೆ ಹಿಂದೂಗಳ ಶ್ರದ್ಧಾ ಕೇಂದ್ರಗಳನ್ನು ಇತಿಹಾಸದಲ್ಲಿ ಗುರಿಯಾಗಿಸಿ ದಾಳಿ ಮಾಡಲಾಗಿತ್ತು. ಈಗ ವಕ್ ಮೂಲಕವೂ ಅಂಥದೇ ಹುನ್ನಾರ ನಡೆದಿದ್ದು, ಸಮಾಜ ಇದ್ಯಾವುದನ್ನೂ ಸಹಿಸುವುದಿಲ್ಲ ಎಂದು ಖಾರವಾಗಿ ಹೇಳಿದರು.

ಡಾ.ಶೇಖರ್ ಮಾನೆ ಮಾತನಾಡಿ, ಯಾವ ದೇಶದಲ್ಲೂ ಇಲ್ಲದ ಕೆಟ್ಟ ಕಾನೂನು ಭಾರತದಲ್ಲಿ ಅಸ್ತಿತ್ವದಲ್ಲಿದೆ. ವಕ್ ಎಂಬುದು ಜವಾಹರ್‌ಲಾಲ್ ನೆಹರೂ ಅವರ ಕೊಡುಗೆ. ತಮಗೆ ತೋಚಿದ ಭೂಮಿ ತಮ್ಮದೆಂದು ಅವರು ಘೋಷಿಸಿಕೊಂಡು ಬಿಟ್ಟರೆ ಅದು ಅವರದೇ ಆಸ್ತಿ ಆಗಿಬಿಡುತ್ತದೆ. ಇಂದು ಸಂವಿಧಾನ ವಿರೋಽಯಾಗಿದ್ದು, ವಕ್ ಬೋರ್ಡ್ ತೆಗೆದು ಹಾಕಬೇಕು. ಸರ್ಕಾರ ಇದಕ್ಕೆ ಗಮನ ಕೊಡಬೇಕು ಎಂದು ತಿಳಿಸಿದರು.

ರೈತರ ಜಮೀನು, ದೇವಸ್ಥಾನ, ಮಠ, ಮಂದಿರಗಳನ್ನು ಬಿಡದೆ ಲ್ಯಾಂಡ್ ಜೆಹಾದ್ ಮಾಡಲಾಗುತ್ತಿದೆ. ಹಿಂದೂ ಸಮಾಜಕ್ಕೆ ಅಪಾಯಕಾರಿ ಎನಿಸುವ ಇಂಥ ನಡೆಯನ್ನು ನಾವೆಲ್ಲ ಒಗ್ಗಟ್ಟಿನಿಂದ ಖಂಡಿಸುವ ಕೆಲಸವಾಗಬೇಕು ಎಂದು ಕರೆ ನೀಡಿದರು.

ಮನ್ನಿಕಟ್ಟಿಯ ಶ್ರೀಶಿವಕುಮಾರ ಸ್ವಾಮೀಜಿ, ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಗಂಗಾಧರ ಮುರನಾಳ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ ಮೇಲ್ನಾಡ, ಮುಖಂಡರಾದ ವಿರುಪಾಕ್ಷ ಅಮೃತಕರ, ಚಂದ್ರಕಾಂತ ಕೇಸನೂರ, ವಿಜಯ ಸುಲಾಖೆ, ಶಂಭುಗೌಡ ಪಾಟೀಲ, ಬಲ್ಲಿಸ್ವಾಮಿ ಸುರಪುರ, ಗಣೇಶ ಶಿಂತ್ರೆ, ಮನೋಜ ಕರೋಡಿವಾಲ, ರಾಜು ನಾಯಕ, ಕೃಷ್ಣಾ ರಾಜೂರ ಇತರರು ಇದ್ದರು. ತಹಸೀಲ್ದಾರ ಅಮರೇಶ ಪಮ್ಮಾರ ಅವರ ಮೂಲಕ ಸರ್ಕಾರದ ನಡೆ ವಿರೋಸಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net