ವಕೀಲರಿಗೆ ನಿವೇಶನ ಮಂಜೂರು ಮಾಡಿ

court room
Published on

ಕಲಬುರಗಿ: ವಕೀಲರ ಕುಟುಂಬಕ್ಕಿರುವ ಆರೋಗ್ಯ ವಿಮೆ ಯೋಜನೆ ೨೫ ಲP್ಷÀ ರೂ.ವರೆಗೆ ಹೆಚ್ಚಿಸಬೇಕು. ರP್ಷÀಣೆಗೆ ಕಾನೂನು ಜಾರಿಗೆ ತರಬೇಕು. ನಿವೇಶನ ಕೊಡಬೇಕು. ಸರ್ಕಾರ ನೀಡುವ ಗೌರವ ಪ್ರಶಸ್ತಿಗೆ ವಕೀಲರನ್ನು ಪರಿಗಣಿಸಬೇಕು ಎಂದು ಭಾರತೀಯ ವಕೀಲರ ಸಮಿತಿ ಸಂಚಾಲಕ ರಾಜಶೇಖರ ಡೊಂಗರಗಾAವ್ ಕೋರಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ರಾಜ್ಯ ವಕೀಲರ ಪರಿಷತ್‌ನಿಂದ ಶನಿವಾರ ಮತ್ತು ಭಾನುವಾರ ೧೦ನೇ ಸಮ್ಮೇಳನವಿದ್ದು, ಮುಂದಿನ ಸಮ್ಮೇಳನ ಕಲಬುರಗಿಯಲ್ಲಿ ನಡೆಸಬೇಕು. ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಯಲ್ಲಿ ತಲಾ ಐದು ವಕೀಲರನ್ನು ನೋಡಲ್ ಅಧಿಕಾರಿಗಳಾಗಿ (ಕಾನೂನು ಸಲಹೆಗಾರರು) ನೇಮಿಸಬೇಕು. ಸರ್ಕಾರ ತನ್ನ ಬಜೆಟ್‌ನಲ್ಲಿ ಶೇ.೧ ಹಣ ವಕೀಲರ ಅಭಿವೃದ್ಧಿಗಾಗಿ ಮೀಸಲಿಡಬೇಕು. ಎಐಬಿಇಯ ಪರೀಕ್ಷೆಯನ್ನು ಕಲಬುರಗಿಯಲ್ಲಿ ನಡೆಸಬೇಕು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಪ್ರಮುಖರಾದ ಸಿದ್ದಮ್ಮ ಪಾಟೀಲ್, ಮಲ್ಲಿಕಾರ್ಜುನ ಕಡಗಂಚಿ, ನಿರಂಜನ್ ತುಂಬದ, ಜಗದೀಶ ರಾಗಿ, ಸುಜಾತಾ ರೆಡ್ಡಿ, ರೇವಣಸಿದ್ದಪ್ಪ ತೇಲಿ, ವಿನೋದಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net