

ಬಾಗಲಕೋಟೆ: ಬಾಗಲಕೋಟೆ ಜಿಲ್ಲಾ ವಕೀಲರ ಸಂಘದ ಚುನಾವಣೆ ಈಚೆಗೆ ನಡೆಯಿತು, ಜಿಲ್ಲಾಧ್ಯಕ್ಷರಾಗಿ ನ್ಯಾಯವಾದಿ ರಮೇಶ ರಂಗಪ್ಪ ಬದ್ನೂರ, ಕಾರ್ಯದರ್ಶಿಯಾಗಿ ಪ್ರಶಾಂತ ನಾರಾಯಣಕರ ಆಯ್ಕೆಯಾಗಿದ್ದಾರೆ.
ಇನ್ನು ಚಂದರಗಿ ಸಿ.ವಿ., ಜಿ.ಜಿ.ಕುಲಕರ್ಣಿ, ಎಸ್.ಬಿ.ನಾಡಗೌಡರ, ಪಿಎಸ್.ಹಕ್ಕಾಪಿಕ್ಕಿ, ವೈ.ವೈ.ಕೊರವರ ಹತ್ತು ವರ್ಷ ಮೇಲ್ಪಟ್ಟ ಸದಸ್ಯತ್ವ ಹುದ್ದೆಗೆ ಹಾಗೂ ಎನ್.ಎಂ.ವಾಲಿ, ಮೋಹರೇರ ಪಿ.ವಿ., ತಿಪ್ಪಣ್ಣ ದೇವರೆಡ್ಡಿ, ಎಸ್.ಸಿ.ಹಿರೇಮಠ, ಎಸ್.ಎಸ್.ಅಂಬಿಗೇರ ಹತ್ತು ವರ್ಷದ ಒಳಗಿನ ಸದಸ್ಯತ್ವ ಹುದ್ದೆಗೆ ಆಯ್ಕಯಾಗಿದ್ದಾರೆ.
ಅಧ್ಯಕ್ಷ, ಕಾರ್ಯದರ್ಶಿ ಸೇರಿ ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಈ ಸಾರಿ ವಕೀಲರ ಸಂಘದ ಚುನಾವಣೆ ಬಹಳಷ್ಟು ಪೈಪೋಟಿಯಿಂದ ಕೂಡಿತ್ತು. ಅಧ್ಯಕ್ಷ ಹುದ್ದೆಗೆ ಕೆ.ಜಿ.ಪುರಾಣಿಕಮಠ, ವಿ.ಬಿ.ಚೌಕಿಮಠ, ರಮೇಶ ಬದ್ನೂರ, ಬಿ.ಎನ್.ಗದ್ದಿ, ಕಾರ್ಯದರ್ಶಿ ಹುದ್ದೆಗೆ ಸಿ.ವಿ.ಹವೇಲಿ, ಪ್ರಶಾಂತ ನಾರಾಯಣಕರ, ಬಸವರಾಜ ಪಿ.ತತಬೀರಿ ಸ್ಪರ್ಧೆ ಮಾಡಿದ್ದರು.
ಅಧ್ಯಕ್ಷ ಹುದ್ದೆಗೆ ರಮೇಶ ಬದ್ನೂರ ಮತ್ತು ಬಿ.ಎನ್.ಗದ್ದಿ ೧೧೩ ಮತಗಳನ್ನು ಪಡೆದು ಸಮಬಲದ ಫೈಟ ನೀಡಿದ್ದರು. ಅಂತಿಮವಾಗಿ ಟಾಸ್ಕ್ ಮೂಲಕ ಅಧ್ಯಕ್ಷ ಹುದ್ದೆ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ರಮೇಶ ಬದ್ನೂರ ಆಯ್ಕೆಯಾದರು. ಪ್ರಶಾಂತ ನಾರಾಯಣಕರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಽಕಾರಿ ಆರ್.ಜಿ.ಹುಲ್ಯಾಳಕರ ತಿಳಿಸಿದ್ದಾರೆ.