

ಕಲಬುರಗಿ: ಹೆಚ್ಚಿನ ಹಣ ನೀಡುವ ಆಮಿಷ ಒಡ್ಡಿ ವಂಚಿಸಿದ ಪಿಎಸಿಎಲ್, ಸಹರಾ, ಸಮೃದ್ಧ ಜೀವನ, ಗರಿಮಾ, ಅಗ್ರಿಗೋಲ್ಡ್ ಸೇರಿ ಇತರ ಖಾಸಗಿ ಕಂಪನಿಗಳ ಸಂತ್ರಸ್ತರಿಗೆ ಪರಿಹಾರ ಕೊಡಿಸಲು ಆಗ್ರಹಿಸಿ ಸೆ.೧ರಂದು ಬೆಳಗ್ಗೆ ೧೧ಕ್ಕೆ ಜಿ¯್ಲÁಧಿಕಾರಿ ಕಚೇರಿ ಎದುರು ಅನರ‍್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ವಂಚನೆ ಸಂತ್ರಸ್ತ ಠೇವಣಿದಾರ ಕುಟುಂಬ ಸಂಘಟನೆ ಜಿಲ್ಲಾಧ್ಯಕ್ಷ ಯಲ್ಲಪ್ಪ ತಳವಾರ ಹೇಳಿದರು. ಹೆಚ್ಚಿನ ಹಣದ ಆಮಿಷ ಒಡ್ಡಿ ಗ್ರಾಹಕರಿಗೆ ಬಾಂಡ್ ನೀಡಿ, ಕಂತಿನಲ್ಲಿ ಹಣ ಪಡೆದ ಕಂಪನಿಗಳು ಲಕ್ಷಾಂತರ ರೂ. ವಂಚನೆ ಮಾಡಿದೆ. ಹಣ ನೀಡಿದ ಸಂತ್ರಸ್ತರು, ಏಜೆಂಟರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸುಪ್ರೀಂ ಕರ‍್ಟ್ ಆದೇಶದಂತೆ ಈ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿ ರ‍್ಕಾರಗಳು ಸಂತ್ರಸ್ತರಿಗೆ ಹಣ ಕೊಡಿಸಿಲ್ಲ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಜಿಲ್ಲೆಯಲ್ಲಿ ವಂಚನೆಗೊಳಗಾದ ಸುಮಾರು ಒಂದು ಲಕ್ಷ ಗ್ರಾಹಕರಿz್ದÉÃವೆ. ರಾಜ್ಯದಲ್ಲಿ ಪಿಎಸಿಎಲ್ ಒಂದು ಕಂಪನಿ ವಂಚನೆಯ ಮೊತ್ತವೇ ೮೦೦ ಕೋಟಿ ರೂ.ನಷ್ಟಿದೆ. ಸಂತ್ರಸ್ತರು ದಾಖಲೆ ಸಮೇತ ತಹಸೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ಅವಕಾಶ ನೀಡಿದ್ದರೂ, ಕಂಪನಿಗಳಿಂದ ಹಣ ಮರಳಿಲ್ಲ. ಆದ್ದರಿಂದ ರಾಷ್ಟçವ್ಯಾಪಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. ಸಂಘಟನೆ ಜಿ¯್ಲÁ ಘಟಕದ ಉಪಾಧ್ಯP್ಷÀ ವಿಜಯಕುಮಾರ ಶೆಟ್ಟಿ, ಕರ‍್ಯರ‍್ಶಿ ಸಿದ್ರಾಮ ಕಟ್ಟಿ, ಸತೀಶ ಕಮಲಾಪುರ, ಶ್ರೀಶೈಲ ಪಾಟೀಲ್, ವೆಂಕಟರೆಡ್ಡಿ ಪಾಟೀಲ್ ಇತರರಿದ್ದರು.