ಲೋಗೋ ವಿಚಾರ ಹಳಿಯಾಳದಲ್ಲಿ ರಾತ್ರೋ ರಾತ್ರಿ ಪ್ರತಿಭಟನೆ

IMG-20220815-WA0002.jpg
Published on

ವಿಜಯವಾಣಿ ಸುದ್ದಿಜಾಲ ಹಳಿಯಾಳ
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಬಂಧ ಹಳಿಯಾಳ ಪುರಸಭೆ ಸಿದ್ಧಪಡಿಸಿ ಪ್ರಕಟಿಸಿದ ಲೋಗೋ ವಿವಾದಕ್ಕೆ ಕಾರಣವಾಗಿದ್ದು, ಪಟ್ಟಣದಲ್ಲಿ ಬಿಜೆಪಿ, ಹಿಂದು ಸಂಘಟನೆಗಳ ಮುಖಂಡರು ತಡರಾತ್ರಿ ಪ್ರತಿಭಟನೆ ನಡೆಸಿದ್ದಾರೆ.
ಪುರಸಭೆ ಸಿದ್ಧಪಡಿಸಿದ ಲೋಗೋದಲ್ಲಿ ತಾಜ್ ಮಹಲ್, ಕುತುಬ್ ಮಿನಾರ್ ಮುಂತಾದ ಒಂದೇ ಧರ್ಮದ ಸ್ಮಾರಕಗಳ ಚಿತ್ರವಿದ್ದು, ಅದನ್ನು ಬದಲಿಸಬೇಕು ಎಂಬುದು ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರ ಆಗ್ರಹವಾಗಿದೆ. ಈ ಸಂಬಂಧ ಭಾನುವಾರ ಬೆಳಗಿನಿಂದ ಪುರಸಭೆಯ ಎದುರು ವಾಗ್ವಾದ ನಡೆದೇ ಇತ್ತು.
ಸಾಯಂಕಾಲ ಬಿಜೆಪಿ ಪ್ರಮುಖರ ಸಭೆ ನಡೆಸಿದ ಪುರಸಭೆ ಮುಖ್ಯಾಧಿಕಾರಿ ಪಿ.ಜಿ.ಶಿಂಧೆ ರಾತ್ರಿ ಹೊತ್ತಿಗೆ ಲೋಗೋ ಬದಲಿಸುವುದಾಗಿ ತಿಳಿಸಿದ್ದರು. ಆದರೆ, ರಾತ್ರಿಯಾದರೂ ಲೋಗೋ ಬದಲಾಗದ ಕಾರಣ ಪುರಸಭೆಯ ಎದುರು ಹಠಾತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.ಕೆಲವರನ್ನು ಪೊಲೀಸ್ ಜೀಪ್ನಲ್ಲಿ ತುಂಬಿ ನಂತರ ಇಳಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net