

ಬಾಗಲಕೋಟೆ: ಲೋಕಸಭೆ ಚುನಾವಣೆ ರಾಜ್ಯದಲ್ಲಿ ಬಿಜೆಪಿ ೨೩ ಸೀಟು ಬರ್ತಿದ್ದಂಗೆ ಈ ಸರ್ಕಾರ ಇರುತ್ತಾ..? ಲೋಕಾಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರದ ಪರಿಸ್ಥಿತಿ ನೋಡುವಿರಂತೆ. ನೆಲಕಚ್ಚುತ್ತದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯದಲ್ಲಿ ಪಕ್ಷಾಂತರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಸಿದ್ದರಾಮಯ್ಯ ಪಕ್ಷಾಂತರ ಪ್ರವೀಣ. ಜೆಡಿಎಸ್‌ನಿಂದ ಫಸ್ಟ ಕಾಂಗ್ರೆಸ್‌ಗೆ ಬಂದವರು ಇದೇ ಸಿದ್ದರಾಮಯ್ಯ. ಸಿದ್ದರಾಮಯ್ಯಗೆ ಪಕ್ಷಾಂತರದ ಬಗ್ಗೆ ಮಾತನಾಡೋ ಅಽಕಾರವೇ ಇಲ್ಲ. ೧೭ ಜನ ಕಾಂಗ್ರೆಸ್ ಶಾಸಕರು ಅಧಿಕಾರ ಸರಿ ಇಲ್ಲ ಅಂತ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದರು. ಆಗ ಸಿದ್ದರಾಮಯ್ಯ ಅವರು ಹೇಳಿದ್ದೇನು. ಸೂರ್ಯ ಚಂದ್ರರಷ್ಟೇ ಸತ್ಯ ಒಬ್ಬರನ್ನೂ ಸೇರಿಸಿಕೊಳ್ಳಲ್ಲ ಅಂತ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಹೇಳಿದರು. ಈಗ ಯಾಕೆ ಅವರ ಮನೆಗೆ ಕೈ ಕಾಲು ಹಿಡಕೊಂಡು ಹೋಗುತ್ತಿದ್ದಾರೆ. ಸೋಮಶೇಖರ ಒಬ್ಬರ ಮನೆಗೆ ನಿನ್ನೆ ಮೂರು ಸಾರಿ ಹೋಗಿದ್ದಾರೆ. ಲೋಕಸಭಾ ಚುನಾವಣೆ ಸಮೀಕ್ಷೆ ಬಂದ ಬಳಿಕ ಅವರಿಬ್ಬರೂ(ಸಿದ್ದರಾಮಯ್ಯ, ಡಿಕೆಶಿ) ನಿದ್ದೆ ಮಾಡ್ತಿಲ್ಲ. ಲೋಕಸಭೆಯಲ್ಲಿ ೨೩ ಬರ್ತಿದ್ದಂಗೆ ಈ ಸರ್ಕಾರ ಇರುತ್ತಾ..? ನಾವು ಕರಿಯೋದೆ ಬೇಡ, ಕಾಂಗ್ರೆಸ್‌ನವರು ದಿಕ್ಕು ದಿಕ್ಕು ಹಾರಡೋಕೆ ಹೋಗುತ್ತಾರೆ ಎಂದು ಲೇವಡಿ ಮಾಡಿದರು.
ಯಾವ ಯಾವ ಪಕ್ಷಕ್ಕೆ ಹೋಗ್ತಾರೆ ನೋಡುವಿರಂತೆ.. ಅವರಿಗೆ ಎನ್ ಮಾಡಬೇಕು ತಿಳಿತಿಲ್ಲ, ಪಾರ್ಟಿ ಉಳಿಯಲ್ಲ. ಮಂತ್ರಿಗಳು, ಎಂಎಲ್ಎಗಳು ಹೇಳುತ್ತಿದ್ದಾರೆ. ಮುನಿಯಪ್ಪ ಅವರು ಎರಡಯವರೆ ವರ್ಷ ಆದ ಬಳಿಕ ಎಲ್ರೂ ಬದಲಾವಣೆ ಆಗಬೇಕು ಅಂತ.ಪೂರಾ ಭ್ರಷ್ಟಾಚಾರ ನಡೀತಿದೆ. ವರ್ಗಾವಣೆ ದಂಧೆ ನಡೀತಿದೆ. ಕಾಂಗ್ರೆಸ್ ನಾಯಕ ರಾಯರೆಡ್ಡಿ ಹೇಳಿದ್ದರೆ ಎಂದು ಟೀಕಿಸಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ ಇದ್ದರು.