ಲೈಂಗಿಕ ದೌರ್ಜನ್ಯಕ್ಕೆ ಅಪ್ತಾಪ್ತೆ ಗರ್ಭಿಣಿ, ಸಾವು

DSC_3648
Published on

ಕಲಬುರಗಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ನಡೆದಿದ್ದು, ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ವೇಳೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿನ ೧೩ ವರ್ಷದ ಬಾಲಕಿ ಮನೆಗೆ ಅಪರಾಧಿ ಬರುತ್ತಿದ್ದು, ಬಾಲಕಿಯನ್ನು ಮತ್ತು ಆಕೆಯ ತಾಯಿಯನ್ನು ಹೆದರಿಸಿ, ಮದುವೆ ಮಾಡಿಕೊಳ್ಳುವುದಾಗಿ ಫುಸಲಾಯಿಸಿದ್ದ. ಈ ವೇಳೆ ತಾಯಿ ಆತನಿಗೆ ಬುದ್ದಿಮಾತು ಹೇಳಿದ್ದಾಳೆ. ಆದರೂ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೂ.೨೭ರಂದು ಬಾಲಕಿ ಹೊಟ್ಟೆ ನೋವು ಎಂದಾಗ ನಗರದ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಎಂಟು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ನನ್ನ ಮಗಳನ್ನು ಬೆದರಿಸಿ ಅತ್ಯಾಚಾರ ಮಾಡಿದ್ದು, ಗರ್ಭಿಣಿಯಾಗಿದ್ದಾಳೆ ಎಂದು ತಾಯಿ ಶುಕ್ರವಾರ ಬೆಳಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬಾಲಕಿ ಸಾವು, ಆಕ್ರೋಶ: ಶುಕ್ರವಾರ ಮಧ್ಯಾಹ್ನ ೩.೩೦ಗಂಟೆಗೆ ಬಾಲಕಿ ಬಹು ಅಂಗಾAಗ ವೈಫಲ್ಯದಿಂದ ಮೃತಪಟ್ಟಿದ್ದಾಳೆ. ಕುಟುಂಬದವರು ಕೆಬಿಎನ್ ಆಸ್ಪತ್ರೆ ಎದುರು ರೋಧಿಸುತ್ತಿರುವ ದೃಶ್ಯ ಕಂಡು ಬಂತು. ನನ್ನ ಮಗಳನ್ನು ಹೆದರಿಸಿ ಕಾರ್‌ನಲ್ಲಿ ಕರೆದುಕೊಂಡು ಹೋಗಿ ನಾಲ್ಕಾರು ಜನರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಾಲಕಿ ತಾಯಿ ಸಂಬAಧಿಕರ ಎದುರು ರೋಧಿಸುವುದು ಕಂಡು ಬಂತು.
ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದ ನಗರ ಪೊಲೀಸ್ ಉಪ ಆಯುಕ್ತೆ ಕನಿಕಾ ಸಿಕ್ರಿವಾಲಾ ಮಾಧ್ಯಮದವರೊಂದಿಗೆ ಮಾತನಾಡಿ, ೧೩ ವರ್ಷದ ಬಾಲಕಿ ಎಂಟು ತಿಂಗಳ ಗರ್ಭಿಣಿಯಾಗಿದ್ದು, ಬಾಲಕಿಯನ್ನು ಗುರುವಾರ ತಡರಾತ್ರಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶುಕ್ರವಾರ ಮಧ್ಯಾಹ್ನ ೩.೩೦ಕ್ಕೆ ಬಹು ಅಂಗಾಗ ವೈÀಲ್ಯದಿಂದ ಬಾಲಕಿ ಮೃತಪಟ್ಟಿದ್ದಾಳೆ. ಈ ಕುರಿತು ಪೋಸ್ಕೊ ಅಡಿ ಸಬ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆಗೆ ಜಿಮ್ಸ್ಗೆ ರವಾನೆ ಮಾಡಲಾಗಿದೆ. ಪ್ರಕಣಕ್ಕೆ ಸಂಬAಧಿಸಿದAತೆ ಒಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಂದು ಪ್ರಾಥಮಿಕ ಮಾಹಿತಿ ನೀಡಿದರು.

ಅತ್ಯಾಚಾರ ವಿರೋಧಿಸಿ ಮಿಂಚಿನ ಪ್ರತಿಭಟನೆ: ನಗರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಬಾಲಕಿ ಮೃತಪಟ್ಟ ಘಟನೆ ಖಂಡಿಸಿ ಆಸ್ಪತ್ರೆ ಬಳಿ ಜಮಾಯಿಸಿದ ದಲಿತ ಸೇನೆ ಕಾರ್ಯಕರ್ತರು ನಗರದ ಸಿದ್ಧಿ ಪಾಷಾ ದರ್ಗಾ ಎದುರಿನ ಮುಖ್ಯ ರಸ್ತೆಯನ್ನು ತಡೆದು ಮಿಂಚಿನ ಪ್ರತಿಭಟನೆ ನಡೆಸಿದರು.
ಬಾಲಕಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ಆರೋಪಿಗಳನ್ನು ಬಂಧಿಸಬೇಕು, ತನಿಖೆ ವಿಳಂಬ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು, ತನಿಖೆ ಶೀಘ್ರ ಪೂರ್ಣಗೊಳಿಸಬೇಕು ಎಂದು ಕಿಡಿ ಕಾರಿದರು. ಇದರಿಂದ ಸುಮಾರು ಒಂದು ಗಂಟೆ ಸಂಚಾರ ದಟ್ಟಣೆ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net